ಚಾಲಕರಿಗೆ ಕಿಟ್ ವಿತರಣೆ : ಮಿಟ್ಟು ಚಂಗಪ್ಪ ಸಮಾಜಸೇವೆಗೆ ಸಲೀಂ ಅಹ್ಮದ್ ಶ್ಲಾಘನೆ

29/05/2020

ಮಡಿಕೇರಿ ಮೇ 29 : ಕೆಪಿಸಿಸಿ ಹಿರಿಯ ಉಪಾಧ್ಯಕ್ಷ ಮಿಟ್ಟು ಚಂಗಪ್ಪ ಅವರ ಸಮಾಜ ಸೇವೆಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಮೆಚ್ಚುಗೆ ವ್ಯಕ್ತಪಡಿಸಿದರು.
ಮಾಜಿ ಪ್ರಧಾನಿ ದಿ.ರಾಜೀವ್ ಗಾಂಧಿ ಅವರ ಸ್ಮರಣಾರ್ಥ ಮಡಿಕೇರಿಯಲ್ಲಿ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಆಯೊಜಿಸಿದ ಟ್ಯಾಕ್ಸಿ ಚಾಲಕರಿಗೆ ದಿನಸಿ ಕಿಟ್ ವಿತರಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಜೀವ್ ಗಾಂಧಿ ಅವರ ಆಪ್ತ ವಲಯದ ಸದಸ್ಯರಾಗಿದ್ದ ಮಿಟ್ಟು ಚಂಗಪ್ಪ ಅವರು ಕಿಟ್ ವಿತರಣೆಗೆ ಪ್ರಾಯೋಜಕತ್ವ ನೀಡುವ ಮೂಲಕ ರಾಜೀವ್ ಸ್ಮರಣೆಯನ್ನು ಅರ್ಥಪೂರ್ಣಗೊಳಿಸಿದ್ದಾರೆ ಎಂದು ಬಣ್ಣಿಸಿದರು.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯಲ್ಲಿ ಅನೇಕ ದಶಕಗಳಿಂದ ಸೇವೆ ಸಲ್ಲಿಸುತ್ತಿರುವ ಮಿಟ್ಟು ಚಂಗಪ್ಪನವರು ನಮಗೆಲ್ಲಾ ಮಾರ್ಗದರ್ಶಕರು ಎಂದು ಸಲೀಂ ಹೇಳಿದರು.
ಕಿಟ್ ವಿತರಣಾ ಕಾರ್ಯಕ್ರಮವನ್ನು ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನಿರ ಮೈನಾ ಹಾಗೂ ತಂಡದ ಸದಸ್ಯರು ನಿರ್ವಹಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್, ವಿಧಾನ ಪರಿಷತ್ ಸದಸ್ಯರಾದ ವೀಣಾಅಚ್ಚಯ್ಯ, ಧರ್ಮಸೇನಾ, ಕೆಪಿಸಿಸಿ ಉಸ್ತುವಾರಿ ಮಂಜುಳಾರಾಜ್, ಪ್ರಮುಖರಾದ ಸಿ.ಎಸ್.ಅರುಣ್ ಮಾಚಯ್ಯ, ಕೆ.ಪಿ.ಚಂದ್ರಕಲಾ, ನಾಪಂಡ ಮುತ್ತಪ್ಪ, ಹೆಚ್.ಎಂ.ನಂದಕುಮಾರ್, ವೀಕ್ಷಕ ಟಿ.ಎಂ.ಶಾಹಿದ್, ಬಿ.ಸಿ.ಸಿ ಅಧ್ಯಕ್ಷರಾದ ಅಪ್ರು ರವೀಂದ್ರ, ರಂಜಿಪೂಣಚ್ಚ, ನವೀನ್, ಸತೀಶ್, ಅನಂತ್, ಇಸ್ಮಾಯಿಲ್, ಮುಖಂಡರುಗಳಾದ ಶಿವುಮಾದಪ್ಪ, ವಿ.ಪಿ.ಶಶಿಧರ್, ಪ್ರಧಾನ ಕಾರ್ಯದರ್ಶಿಗಳಾದ ವಿ.ಪಿ.ಸುರೇಶ್, ಎಸ್.ಎಂ.ಚಂಗಪ್ಪ, ಧರ್ಮಜಾ ಉತ್ತಪ್ಪ, ಟಾಟು ಮೊಣ್ಣಪ್ಪ, ಸುರಯ್ಯ ಅಬ್ರಹಾರ್, ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಕೆ.ಎ.ಯಾಕುಬ್, ಟ್ಯಾಕ್ಸಿ ಚಾಲಕರ ಸಂಘದ ಅಧ್ಯಕ್ಷ ಜೈಜಗದೀಶ್, ಪ್ರಭುರೈ, ರವಿಗೌಡ, ಜಿ.ಪಂ ಸದಸ್ಯರಾದ ಪಂಕಜ, ಶ್ರೀಜಾ ಸಾಜಿ, ಕುಸುಮಾ ಜೋಯಪ್ಪ, ಮಿನಾಜ್ ಪ್ರವೀಣ್ ಮತ್ತಿತರರು ಉಪಸ್ಥಿತರಿದ್ದರು.