ಕಾಫಿ ಘಟಕದ ತ್ಯಾಜ್ಯದಿಂದ ಪರಿಸರದ ಮೇಲೆ ಹಾನಿ : ಕ್ರಮಕ್ಕೆ ಐಎನ್‌ಟಿಯುಸಿ ರಾಜ್ಯ ಉಪಾಧ್ಯಕ್ಷ ನಾಪಂಡ ಮುತ್ತಪ್ಪ ಮನವಿ

29/05/2020

ಮಡಿಕೇರಿ ಮೇ 29 : ಕೊಡಗಿನ ಕುಶಾಲನಗರದಲ್ಲಿರುವ ಕಾಫಿ ಘಟಕವು ಹೊರಬಿಡುತ್ತಿರುವ ಸಂಸ್ಕರಿಸದ ತ್ಯಾಜ್ಯದಿಂದ ಪರಿಸರದ ಮೇಲಾಗುತ್ತಿರುವ ದುಷ್ಪರಿಣಾಮಗಳಿಂದ ರೈತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ತುರ್ತುಗಮನಹರಿಸುವಂತೆ ಒತ್ತಾಯಿಸಿ INTUC ರಾಜ್ಯ ಉಪಾಧ್ಯಕ್ಷ ನಾಪಂಡ ಮುತ್ತಪ್ಪ ಅವರು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋವಿಂದ ರಾಜ್ ದಾಸ್, ತೆನ್ನಿರ ಮೈನಾ, ಯೂತ್ ಕಾಂಗ್ರೇಸ್ ನ ಲಿಂಗರಾಜು ಹಾಗೂ ಗ್ರಾಮಸ್ಥರು ಹಾಜರಿದ್ದರು.