ಮಡಿಕೇರಿಯಲ್ಲಿ ಶಾಸಕರಿಂದ ಆಹಾರ ಕಿಟ್ ವಿತರಣೆ

29/05/2020

ಮಡಿಕೇರಿ ಮೇ.29 : ಶಾಸಕರಾದ ಕೆ.ಜಿ.ಬೋಪಯ್ಯ ಮತ್ತು ಎಂ.ಪಿ.ಅಪ್ಪಚ್ಚು ರಂಜನ್ ಅವರು ಖಾಸಗಿ ಬಸ್ ಚಾಲಕರು, ನಿರ್ವಾಹಕರು, ಕ್ಲೀನರ್‍ಗಳು ಮತ್ತು ದೇವಸ್ಥಾನದ ಅರ್ಚಕರಿಗೆ ನಗರದ ಅಂಬೇಡ್ಕರ್ ಭವನದಲ್ಲಿ  ಆಹಾರದ ಕಿಟ್ ವಿತರಿಸಿದರು.
ಖಾಸಗಿ ಬಸ್ ಚಾಲಕರು, ನಿರ್ವಾಹಕರು, ಕ್ಲೀನರ್‍ಗಳು ಸೇರಿದಂತೆ ಒಟ್ಟು 93 ಜನರಿಗೆ ಮತ್ತು 77 ಅರ್ಚಕರಿಗೆ ತಲಾ 10 ಕೆ.ಜಿ.ಅಕ್ಕಿ, 1 ಲೀಟರ್ ಎಣ್ಣೆ, 1 ಕೆ.ಜಿ ಉಪ್ಪು , ಬೇಳೆ ಮತ್ತು ಸಕ್ಕರೆ ಒಳಗೊಂಡ ಕಿಟ್ ವಿತರಿಸಲಾಯಿತು.
ಜಿ.ಪಂ.ಅಧ್ಯಕ್ಷರಾದ ಬಿ.ಎ.ಹರೀಶ್, ಮಡಿಕೇರಿ ತಾ.ಪಂ.ಇಒ ಲಕ್ಷ್ಮೀ, ತಹಶೀಲ್ದಾರರಾದ ಮಹೇಶ್, ಶಿರಸ್ತೇದಾರರಾದ ಪ್ರವೀಣ್ ಕುಮಾರ್ ಇತರರು ಇದ್ದರು.