ಕೊಮ್ಮಘಟ್ಟ ಕೆರೆಯಲ್ಲಿ ಮೀನುಗಳ ಸಾವು

30/05/2020

ಬೆಂಗಳೂರು ಮೇ 29 : ಬೆಂಗಳೂರಿನ ಪ್ರಮುಖ ಕೆರೆಗಳಲ್ಲಿ ಒಂದಾಗಿರುವ ಕೊಮ್ಮಘಟ್ಟ ಕೆರೆಯಲ್ಲಿ ಶುಕ್ರವಾರ ರಾಶಿ ರಾಶಿ ಮೀನುಗಳು ಸತ್ತು ನೀರಿನಲ್ಲಿ ತೇಲುತ್ತಿದ್ದ ವಿದ್ರಾವಕ ಘಟನೆ ಬೆಳಕಿಗೆ ಬಂದಿದೆ.
ಸುಮಾರು 35 ಎಕೆರೆ ವಿಸ್ತೀರ್ಣದಲ್ಲಿರುವ ಕೊಮ್ಮಘಟ್ಟ ಕೆರೆಯಲ್ಲಿ ಇಂದು ಟನ್ ಗಟ್ಟಲೆ ಮೀನುಗಳು ಸತ್ತು ನೀರಿನ ಮೇಲೆ ತೇಲುತ್ತಿದ್ದವು. ಸ್ಥಳೀಯ ಮೀನುಗಾರರೊಬ್ಬರು ತೆಪ್ಪದ ಮೂಲಕ ನೀರಿನ ಮೇಲಿದ್ದ ರಾಶಿ ರಾಶಿ ಮೀನುಗಳನ್ನು ತೆರವು ಮಾಡುತ್ತಿದ್ದ ದೃಶ್ಯ ವಿದ್ರಾವಕವಾಗಿತ್ತು. ಕೊಮ್ಮಘಟ್ಟ ಕೆರೆಯಲ್ಲಿ ಇಂತಹ ಘಟನೆ ಇದೇ ಮೊದಲೇನಲ್ಲ. ಈ ಹಿಂದೆಯೇ ಕೂಡ ಸಾಕಷ್ಟು ಬಾರಿ ಇಲ್ಲಿ ಮಾಲೀನ್ಯದಿಂದಾಗಿ ಮೀನುಗಳ ಸತ್ತು ನೀರಿನ ಮೇಲೆ ತೇಲುತ್ತಿದ್ದ ಸಾಕಷ್ಟು ಉದಾಹರಣೆಗಳಿವೆ, ಹೀಗಿದ್ದೂ ಇಲ್ಲಿನ ಅಧಿಕಾರಿಗಳು ಮಾತ್ರ ಮೂಕ ಪ್ರೇಕ್ಷಕರಾಗಿದ್ದಾರೆ.