ಜೀವನದಾರಿ ಅನಾಥ ಆಶ್ರಮಕ್ಕೆ ಅಂಗನವಾಡಿ ಕಾರ್ಯಕರ್ತೆಯರಿಂದ ಆರ್ಥಿಕ ನೆರವು

30/05/2020

ಸುಂಟಿಕೊಪ್ಪ,ಮೇ.29: ಗದ್ದೆಹಳ್ಳದ ವಿಕಾಸ್ ಜನಸೇವಾ ಟ್ರಸ್ಟ್‍ನ ಜೀವನದಾರಿ ಅನಾಥ ಆಶ್ರಮಕ್ಕ್ರೆ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರು ಭೇಟಿ ನೀಡಿ ಆಶ್ರಮದ ನಿವಾಸಿಗಳ ಪೋಷಣೆಗೆ 5,000 ರೂಗಳನ್ನು ಆಶ್ರಮದ ಅಧ್ಯಕ್ಷರಾದ ರಮೇಶ್ ಅವರಿಗೆ ನೀಡುವುದರ ಮೂಲಕ ಸಹಾಯ ಹಸ್ತ ಚಾಚಿದರು.
ಈ ಸಂದರ್ಭ ಅಂಗನವಾಡಿ ಹಿರಿಯ ಕಾರ್ಯಕರ್ತೆ ಸಾವಿತ್ರಿ, ಆರ್.ಸರಳ, ಕೆ.ಆರ್.ಮಂಜುಳಾ, ಪಿ.ವಿಜಯ, ಜೆಸ್ಸಿ ಡಿಸೋಜ, ಎಂ.ಜಯಶೀಲ ಇತರರು ಹಾಜರಿದ್ದರು.