ಸೋಮವಾರಪೇಟೆ ತಾಲ್ಲೂಕು ಭೂ ನ್ಯಾಯಮಂಡಳಿ ಸದಸ್ಯರಾಗಿ ಶಶಿಕಾಂತ್ ರೈ ನೇಮಕ

30/05/2020

ಸುಂಟಿಕೊಪ್ಪ,ಮೇ. 30 : ಸೋಮವಾರಪೇಟೆ ತಾಲ್ಲೂಕು ಭೂ ನ್ಯಾಯಮಂಡಳಿಗೆ ಸದಸ್ಯರಾಗಿ ಸುಂಟಿಕೊಪ್ಪದ ಶಶಿಕಾಂತ್ ರೈ ನೇಮಕಗೊಳಿಸಿ ಆದೇಶ ಹೊರಡಿಸಿದ್ದಾರೆ.
ಕರ್ನಾಟಕ ಭೂ ಸುಧಾರಣೆ ಕಾಯ್ದೆ, 1960ರ ಕಲಂ 48ರ ಉಪ ಕಲಂ(1)ರಿಂದ (3)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಸೋಮವಾರಪೇಟೆ ತಾಲ್ಲೂಕು ಭೂ ನ್ಯಾಯ ಮಂಡಳಿಗೆ ಸದಸ್ಯರಾಗಿ ಡಾ.ಶಶಿಕಾಂತ್ ರೈ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನಾಮನಿರ್ದೇಶನ ಮಾಡಿ ಆದೇಶಿಸಿದೆ.