ಕಂಟೈನರ್- ಬೈಕ್ ನಡುವೆ ಡಿಕ್ಕಿ : ಬೈಕ್ ಸವಾರ ಸಾವು : ಸುಂಟಿಕೊಪ್ಪದ ಕೆದಕಲ್‌ನಲ್ಲಿ ಘಟನೆ

30/05/2020

ಮಡಿಕೇರಿ ಮೇ 30 : ಸುಂಟಿಕೊಪ್ಪ ಸಮೀಪದ ಕೆದಕಲ್ ಭದ್ರಕಾಳಿ ದೇವಾಲಯದ ತಿರುವಿನಲ್ಲಿ ಕಂಟೈನರ್ ಲಾರಿಯ ಚಕ್ರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬೈಕ್  ಸವಾರ ಸಾವನ್ನಪ್ಪಿದ್ದ ಘಟನೆ ನಡೆದಿದೆ.
ಕುಶಾಲನಗರ ಕಡೆಯಿಂದ ಮಡಿಕೇರಿ ಕಡೆಗೆ ತೆರಳುತ್ತಿದ್ದ ಬೈಕು ಮಡಿಕೇರಿಯಿಂದ ಕುಶಾಲನಗರ ಕಡೆಗೆ ತೆರಳುತ್ತಿದ್ದ ಕಂಟೈನರ್ ಲಾರಿಯ ಚಕ್ರಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಪರಿಣಾಮ ಆಯಾ ತಪ್ಪಿ‌ ಬಿದ್ದ ಸವಾರನ ಮೇಲೆ ಲಾರಿಯ ಹಿಂದಿನ‌ ಚಕ್ರ ಹರಿದಿದೆ.
ಕೂಡಲೇ ಸ್ಥಳೀಯರು ಆಂಬುಲೇನ್ಸ್ ಮೂಲಕ ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ರವಾನಿಸುವ ಸಂದರ್ಭದಲ್ಲಿ ದಾರಿ ಮದ್ಯೆ ಸಾವನ್ನಾಪ್ಪಿದ್ದಾನೆ.
ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.