ಹುಣಸೆ ಹಣ್ಣಿನ ಉಪಯೋಗಗಳು

30/05/2020

ಹುಣಸೆ (Tamarind) ಎಲ್ಲರಿಗೂ ಪರಿಚಿತ ಸಾಂಬಾರ ಪದಾರ್ಥ. ಈ ಮರ ಮೂಲತಃ ಆಫ್ರಿಕ ಖಂಡದ ಪೂರ್ವ ಭಾಗದ್ದು. ಬಹಳ ಹಿಂದೆಯೇ ಇದು ಭಾರತಕ್ಕೆ ಪರಿಚಯಿಸಲ್ಪಟ್ಟಿತು. ಇದು ಈಗ ಭಾರತದೆಲ್ಲೆಡೆ ಸಾಲು ಮರಗಳಾಗಿ, ನೆಡುತೋಪುಗಳಾಗಿ ಬೆಳಸಲ್ಪಡುತ್ತಿದೆ.

ಉಪಯೋಗಗಳು 

ಇದರಹಣ್ಣು ಮುಂಚಿನಿಂದಲೂ ಒಂದು ಸಾಂಬಾರ ಪದಾರ್ಥವಾಗಿದೆ. ಹಣ್ಣು ಹಿತ್ತಾಳೆ ಪಾತ್ರೆಗಳನ್ನು ತೊಳೆಯಲು ಉಪಯೋಗವಾಗುತ್ತದೆ. ಸಾಲು ಮರಗಳಾಗಿ ನೆಡಲು ಉತ್ತಮವಾಗಿದೆ. ಹಣ್ಣು, ಎಲೆ ಹಾಗೂ ತೊಗಟೆ ಔಷಧಗಳ ತಯಾರಿಕೆಯಲ್ಲಿ ಉಪಯೋಗವಾಗುತ್ತದೆ. ಹಣ್ಣಿನ ಹಲವಾರು ಬಗೆಯ ಖಾದ್ಯಗಳು ಪ್ರಪಂಚದಾದ್ಯಂತ ಪ್ರಚಲಿತವಾಗಿದೆ. ದಾರುವು ಗಡುಸಾಗಿರುವುದರಿಂದ ಒನಕೆ, ಕೊಡತಿ, ಚರಕ ಮುಂತಾದವುಗಳ ತಯಾರಿಕೆಯಲ್ಲಿ ಬಳಸುತ್ತಾರೆ.

ಉಪ್ಪಿನಕಾಯಿ ಏಜೆಂಟ್ ಅಥವಾ ಘಾನಾದಲ್ಲಿ ಕೆಲವು ವಿಷಯುಕ್ತ ಮುಡಿಗೆಣಸುಗಳನ್ನುಮಾನವ ಬಳಕೆಗೆ ಸುರಕ್ಷಿತವಾಗಿ ಮಾಡುವ ಸಾಧನವಾಗಿ ಬಳಸಲಾಗುತ್ತದೆ

*ಇದನ್ನು ಖಾರದ ಭಕ್ಷ್ಯಗಳ ಒಂದು ಭಾಗವಾಗಿ ಬಳಸಲಾಗುತ್ತದೆ *ಸಾಂಪ್ರದಾಯಿಕ ಔಷಧವಾಗಿದ್ದು ಬಳಸಲಾಗುತ್ತದೆ.

*ಮರದ ಮರಗೆಲಸ ಮತ್ತು ಹುಣಿಸೆಹಣ್ಣಿನ ಬೀಜದ ಎಣ್ಣೆಯನ್ನು ಉಪಯೊಗಮಾಡಲಾಗುತ್ತದೆ.

*ಇದರ ಎಲೆಗಳನ್ನು ಭಾರತೀಯ ತಿನಿಸುಗಳಲ್ಲಿ, ವಿಶೇಷವಾಗಿ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಬಳಸಲಾಗುತ್ತದೆ .

*ಆಹಾರದ ಜೊತೆಗೆ ಉಪಯೊಗಿಸುತ್ತಾರೆ.

ಜೌಷಧಿಯಾಗಿ

  • ನೀರಿನಲ್ಲಿ ಹುಣಸೆಹುಳಿ ಬೆರೆಸಿದ ನಿಂಬೆ ಚರಟವನ್ನು ನೆನೆಸಿ, ಕೂದಲ ಬುಡಕ್ಕೆ ಹಚ್ಚಿ. ಇದು ಕೂದಲನ್ನು ಬೇರಿನಿಂದಲೇ ಗಟ್ಟಿಗೊಳಿಸಿ, ಕೂದಲುದುರುವಿಕೆಯನ್ನು ತಡೆಯುತ್ತದೆ.
  • ಹುಣಸೆ ತಿಂದರೆ ಆ್ಯಂಟಿಸೆಪ್ಟಿಕ್‌ನಂತೆ ಕೆಲಸಮಾಡಿ, ಗಾಯಗಳು ಬೇಗ ಮಾಯುವಂತೆ ಮಾಡುತ್ತದೆ.
  • ದೇಹದೊಳಗೆ ಇನ್ಫೆಕ್ಷನ್ ಆಗದಂತೆ ನೋಡಿಕೊಳ್ಳುತ್ತದೆ.
  • ಕೊಲೆಸ್ಟೆರಾಲ್ ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
  • ಹುಣಸೆಹುಳಿಯನ್ನು ಟೀಯೊಂದಿಗೆ ಬೆರೆಸಿ ಕೊಡುವುದು ಮಲೇರಿಯಾ ನಿಯಂತ್ರಣಕ್ಕೆ ಸಹಕಾರಿ.
  • ಜಾಂಡೀಸ್ ಹಾಗೂ ಅಲ್ಸರ್ ಔಷಧಿ ತಯಾರಿಕೆಯಲ್ಲಿ ಹುಣಸೆ ರಸವನ್ನು ಬಳಸಲಾಗುತ್ತದೆ.
  • ಆ್ಯಂಟಿಆಕ್ಸಿಡೆಂಟ್ಸ್ ಹೆಚ್ಚಿದ್ದು, ಕ್ಯಾನ್ಸರ್ ಕಣಗಳ ಬೆಳವಣಿಗೆಯನ್ನು ಕುಂಠಿಸುತ್ತದೆ.
  • ಹುಣಸೆ ಹೂವಿನಿಂದ ತೆಗೆದ ರಸವು ಮೂಲವ್ಯಾಧಿಯನ್ನು ನಿವಾರಿಸುತ್ತದೆ.
  • ರಕ್ತ ಶುದ್ಧಿಗೂ ಹುಣಸೆ ಹಣ್ಣು ಬೆಸ್ಟ್ ಮದ್ದು.