ಹೆಸರುಕಾಳಿನ ಚಪಾತಿ ಮಾಡುವ ವಿಧಾನ
30/05/2020

ಚಪಾತಿಯೆಂದರೆ ಮಕ್ಕಳಿಗಷ್ಟೇ ಅಲ್ಲ ಅನ್ನವನ್ನು ಅಷ್ಟೊಂದು ಇಷ್ಟಪಡದಿರುವ ಎಲ್ಲರಿಗೂ ಬಲು ಪ್ರಿಯ ಆಹಾರ, ಆರೋಗ್ಯಕರ ಕೂಡ. ಹೆಸರುಕಾಳು ಬಳಸಿ ತಯಾರಿಸಿದ ಚಪಾತಿ ಬಲು ರುಚಿಕರ.
ಬೇಕಾಗುವ ಪದಾರ್ಥಗಳು : ಹೆಸರುಕಾಳು – 1 ಕಪ್, ಗೋಧಿಹಿಟ್ಟು – 2 ಕಪ್, ಎಣ್ಣೆ ಬೇಕಾಗುವಷ್ಟು, ಉಪ್ಪು ರುಚಿಗೆ ತಕ್ಕಷ್ಟು
ಜೀರಿಗೆ ಪುಡಿ – ಅರ್ಧ ಚಮಚ
ತಯಾರಿಸುವ ವಿಧಾನ: ಮೊದಲು ಹೆಸರುಕಾಳನ್ನು 24 ಗಂಟೆ ನೆನೆಸಿಡಿ. ಕುಕ್ಕರ್ ನಲ್ಲಿ ಚೆನ್ನಾಗಿ ಬೇಯಿಸಿಕೊಳ್ಳಿ. ಮಿಕ್ಸಿಗೆ ಹಾಕಿ ರುಬ್ಬಿಕೊಂಡು ಗೋಧಿಹಿಟ್ಟು, ಉಪ್ಪು ಮತ್ತು ಜೀರಿಗೆಪುಡಿಯೊಂದಿಗೆ ಚಪಾತಿ ಹಿಟ್ಟಿನಂತೆ ಕಲಸಿ, ಚಪಾತಿ ಮಾಡಿ ಬೇಯಿಸಿ. ಚಟ್ನಿ ಅಥವಾ ಸಾರಿನೊಂದಿಗೆ ತಿನ್ನಲು ನೀಡಿ. ಆರೋಗ್ಯಕ್ಕೆ ತುಂಬಾ ಒಳ್ಳೆಯ ಆಹಾರ.