ಎಸ್‍ಕೆಎಸ್‍ಎಸ್‍ಎಫ್ ಜಿಸಿಸಿ ಅಧ್ಯಕ್ಷರಾಗಿ ಹುಸೈನ್ ಫೈಜಿ ಬಜೆಗುಂಡಿ ಆಯ್ಕೆ

30/05/2020

ಮಡಿಕೇರಿ ಮೇ 30 : ಕೊಡಗಿನ ಅನಿವಾಸಿ ಜನರ ಏಳಿಗೆಗಾಗಿ ಕಾರ್ಯ ನಿರ್ವಹಿಸುತ್ತಿರುವ ಎಸ್‍ಕೆಎಸ್‍ಎಸ್‍ಎಫ್ ಜಿಸಿಸಿಯ ನೂತನ ಕಾರ್ಯಕಾರಿ ಸಮಿತಿಯನ್ನು ಅಬ್ದುಲ್ ರಹಮಾನ್ ಉಸ್ತಾದ್ ಅವರ ಅನುಮೋದನೆಯೊಂದಿಗೆ ಅಸ್ತಿತ್ವಕ್ಕೆ ತರಲಾಗಿದೆ.
ಎಸ್‍ಕೆಎಸ್‍ಎಸ್‍ಎಫ್ ಜಿಸಿಸಿ ಸಮಿತಿಯ ನೂತನ ಅಧ್ಯಕ್ಷರಾಗಿ ಹುಸೈನ್ ಫೈಜಿ ಬಜೆಗುಂಡಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಝಯಿನುದ್ದೀನ್ ಮುಸ್ಲಿಯಾರ್, ರಹೀಂ, ಪ್ರದಾನ ಕಾರ್ಯದರ್ಶಿ ಶಿಹಾಬ್, ಕೋಶಾಧಿಕಾರಿ ರಜಾಕ್ ಫೈಜಿ, ಕಾರ್ಯದರ್ಶಿಯಾಗಿ ಅಬ್ದುಲ್ ಸಮದ್, ಸಂಘಟನಾ ಕಾರ್ಯದರ್ಶಿ ಅಬ್ದುಲ್ ಗಫೂರ್, ಸಹ ಕಾರ್ಯದರ್ಶಿಯಾಗಿ ಅಶ್ರಫ್, ನಿಜಾಮ್, ರಫೀಕ್ ನೇಮಕಗೊಂಡಿದ್ದಾರೆ.
ಪ್ರಚಾರ ಸಮಿತಿಗೆ (ಮಾಧ್ಯಮ ವಿಭಾಗ) ಶಫೀಕ್, ಸಲಹಾ ಸಮಿತಿಗೆ ಅಬ್ಬಾಸ್ ಹಾಜಿ, ಸಿದ್ದೀಕ್ ಬಾಕವಿ, ವಿಕಾಯ ಅಧ್ಯಕ್ಷರಾಗಿ ಅಬೂ ಸಾಲಿಹ್ ಅಮಾನಿ ಆಯ್ಕೆಯಾಗಿದ್ದಾರೆ.
ಸಭೆಯ ನೇತೃತ್ವವನ್ನು ಕೊಡಗು ಜಿಲ್ಲಾ ಎಸ್‍ಕೆಎಸ್‍ಎಸ್‍ಎಫ್ ಸಮಿತಿಯ ಅಧ್ಯಕ್ಷ ತಮ್ಲೀಕ್ ದಾರಿಮಿ, ಪ್ರಧಾನ ಕಾರ್ಯದರ್ಶಿ ಶುಹೈಬ್ ಫೈಝಿ, ಉಪಾಧ್ಯಕ್ಷ ಹನೀಫ್ ಫೈಜಿ ವಹಿಸಿದ್ದರು.
ಎಸ್‍ಕೆಎಸ್‍ಎಸ್‍ಎಫ್ ಕರ್ನಾಟಕ ರಾಜ್ಯ ಕಾರ್ಯದರ್ಶಿ ಆರಿಫ್ ಫೈಜಿ, ಕೇಂದ್ರ ಸಮಿತಿ ಸದಸ್ಯ ಇಕ್ಬಾಲ್ ಮುಸ್ಲಿಯಾರ್, ಜಿಲ್ಲಾ ಉಪಾಧ್ಯಕ್ಷರುಗಳಾದ ಅಶ್ರಫ್ ಮಿಸ್ಬಾಹಿ, ಪಿ.ಎಂ.ಅಬ್ದುಲ್ಲ ಹಾಜರಿದ್ದರು.