ವನ್ಯಪ್ರಾಣಿಗಳ ಬೇಟೆ : ನಾಲ್ವರ ಬಂಧನ

May 30, 2020

ಮಡಿಕೇರಿ ಮೇ 30 : ಕರಿಕೆ ಸಮೀಪದ ಚೆತ್ತುಕಾಯ ಮೀಸಲು ಅರಣ್ಯದಿಂದ ಕಾಡು ಪ್ರಾಣಿಗಳನ್ನು ಬೇಟೆಯಾಡಿದ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.
ಉಪಅರಣ್ಯ ಸಂರಕ್ಷಣಾಧಿಕಾರಿ ಎಸ್. ಪ್ರಭಾಕರನ್ ಅವರ ಮಾರ್ಗದರ್ಶನದಲ್ಲಿ ವಲಯ ಅರಣ್ಯಅಧಿಕಾರಿ ದೇವರಾಜ್ ನೇತೃತ್ವದ ತಂಡ ಖಚಿತ ಮಾಹಿತಿಯ ಮೇರೆಗೆ ದಾಳಿನಡೆಸಿ ಕೆ.ಸಿ.ಸುಂದರ, ಪಿ.ಕೆ.ರಾಮ, ಜೋಷಿ ಜಾರ್ಜ್, ಎಂ.ಆರ್.ಕೃಷ್ಣನ್ ಎಂಬವರನ್ನು ಬಂಧಿಸಿದ್ದಾರೆ.
ಆರೋಪಿಗಳಿಂದ ಕೆ.ಕೆ.ನಿರ್ಮಾಲನಂದ ಅವರಿಗೆ ಸೇರಿದ ಒಂಟಿ ನಳಿಕೆ ಕೋವಿ ಹಾಗೂ ಬೇಟೆಯಾಡಿದ ಕೆಂಜಳಿಲು, ಮುಷ್ಯ ಸೇರಿದಂತೆ ಇತರೆ ವನ್ಯಪ್ರಾಣಿಗಳ ಮಾಂಸವನ್ನು ವಶಪಡಿಸಿಕೊಳ್ಳಲಾಗಿದೆ.
ನಾಲ್ವರ ವಿರುದ್ಧ ವನ್ಯಜೀವಿ ಸಂರಕ್ಷಣಾಕಾಯ್ದೆ 1972 ಕಲಂ 9,39,44,51, 55ರ ಪ್ರಕಾರ ಪ್ರಕರಣ ದಾಖಲಿಸಿ ನ್ಯಾಯಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಮತ್ತೋರ್ವ ತಲೆಮರೆಸಿಕೊಂಡಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಬಂಧಿತರಲ್ಲಿ ಪ್ರಥಮ ಆರೋಪಿಯಾದ ಸುಂದರ ಎಂಬಾತನ ಮೇಲೆ ಎರಡು ವರ್ಷಗಳ ಹಿಂದೆ ತಲಕಾವೇರಿ ವನ್ಯಧಾಮದ ಸರಹದ್ದಿನ ಅರಣ್ಯ ಪ್ರದೇಶದಲ್ಲಿ ಸಿಂಗಳಿಕ ಬೇಟೆಯಾಡಿದ ಪ್ರಕರಣದ ಹಿನ್ನಲೆ ಮಾಂಸ ಹಾಗೂ ಜೋಡುನಳಿಕೆ ಬಂದೂಕುನ್ನು ವಶಪಡಿಸಿ ಪ್ರಕರಣ ದಾಖಲಿಸಲಾಗಿದೆ.