ಸುಂಟಿಕೊಪ್ಪದಲ್ಲಿ ಬೆಂಗಳೂರು ಲಯನ್ಸ್ ಕ್ಲಬ್‍ನಿಂದ ದಿನಸಿ ಕಿಟ್ ವಿತರಣೆ

30/05/2020

ಮಡಿಕೇರಿ ಮೇ 30 : ಬೆಂಗಳೂರು ಲಯನ್ಸ್ ಕ್ಲಬ್ ವತಿಯಿಂದ ಜೇನುಕಾಡು ಹಾಗೂ ಸುಂಟಿಕೊಪ್ಪದಲ್ಲಿ ಆಹಾರ ಕಿಟ್ ಅನ್ನು ವಿತರಿಸಲಾಯಿತು.
ಕರೋನಾ ಲಾಕ್‍ಡೌನ್‍ನಿಂದ ಮನೆಯಲ್ಲಿ ಬಂಧಿಯಾಗಿದ್ದ ಬಡವರು, ವಯೋವೃದ್ಧರು, ವಿಕಲಚೇತನರಿಗೆ ಬೆಂಗಳೂರು ಲಯನ್ಸ್ ಸಂಸ್ಥೆಯ ವತಿಯಿಂದ ಜೇನುಕಾಡು ಹಾಗೂ ಸುಂಟಿಕೊಪ್ಪ ಭಾಗದಲ್ಲಿ ನೆಲೆಸಿರುವ ಆಹಾರ ಕಿಟ್‍ಗಳನ್ನು ಸತ್ತೀವೇಲು ಮತ್ತು ಮತ್ತಿತರರು ಆಗಮಿಸಿ ಸುಂಟಿಕೊಪ್ಪ ಗ್ರಾ.ಪಂ.ಸದಸ್ಯೆ ನಾಗರತ್ನ ಅವರ ನೇತ್ರತ್ವದಲ್ಲಿ ವಿತರಿಸಿದರು.
ಈ ಸಂದರ್ಭದಲ್ಲಿ ಲತೀಫ್, ಇಬ್ರಾಹಿಂ, ಬಾಶೀದ್ ಮತ್ತಿತರರು ಇದ್ದರು.