ಕಾಜೂರು ಮತ್ತು ಕಣಿವೆ ನರ್ಸರಿಯಲ್ಲಿ ವಿವಿಧ ಸಸಿಗಳು ರಿಯಾಯಿತಿ ದರದಲ್ಲಿ ವಿತರಣೆ

May 31, 2020

ಮಡಿಕೇರಿ ಮೇ 31 : ಮಡಿಕೇರಿ ಪ್ರಾದೇಶಿಕ ವಿಭಾಗದ ಸೋಮವಾರಪೇಟೆ ವಲಯದ ಕಾಜೂರು ಮತ್ತು ಕಣಿವೆ ನರ್ಸರಿಯಲ್ಲಿ ವಿವಿಧ ಜಾತಿಯ ಸಸಿಗಳು ರಿಯಾಯಿತಿ ದರದಲ್ಲಿ ವಿತರಿಸಲಾಗುವುದು ಎಂದು ವಲಯ ಅರಣ್ಯ ಅಧಿಕಾರಿ ಶಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನೇರಳೆ, ಸಂಪಿಗೆ, ಹೊಂಗೆ, ಕಾಡು ಬಾದಾಮಿ, ಸಿಲ್ವರ್, ಕೂಳಿ, ಹಬ್ಬೇವು, ಹೊನ್ನೆ, ಮಹಾಘನಿ, ಬೀಟೆ, ನಂದಿ, ಶ್ರೀಗಂಧ, ಕರಡಿ, ಬಿದಿರು, ರಾಮಫಲ, ಹಲಸು ಇತ್ಯಾದಿ ಗಿಡಗಳಿದ್ದು, ಸಾರ್ವಜನಿಕರು ಪಡೆದುಕೊಳ್ಳಬಹುದು.

error: Content is protected !!