ನಿಶ್ಯಕ್ತಿಯಿಂದ ಚೆಂಬು ಗ್ರಾಮದ ನವವಿವಾಹಿತನ ಸಾವು : ಆರೋಗ್ಯ ಇಲಾಖೆ ಸ್ಪಷ್ಟನೆ

May 31, 2020

ಮಡಿಕೇರಿ ಮೇ 31 : ಮಡಿಕೇರಿ ತಾಲ್ಲೂಕಿನ ಚೆಂಬು ಗ್ರಾಮದ ಆನೆಹಳ್ಳದ ನಿವಾಸಿ ನವವಿವಾಹಿತ ಚಂದ್ರಶೇಖರ್ ಎಂಬುವವರು ನಿಶ್ಯಕ್ತಿಯಿಂದ ಮೃತಪಟ್ಟಿರುವುದಾಗಿ ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ.ಶಿವಕುಮಾರ್ ಎಂ. ಸ್ಪಷ್ಟಪಡಿಸಿದ್ದಾರೆ.
ಅತಿಯಾದ ಮದ್ಯಪಾನ ಮತ್ತು ತಂಬಾಕು ಸೇವನೆಯಿಂದ ನಿಶ್ಯಕ್ತರಾಗಿದ್ದ ಚಂದ್ರಶೇಖರ್ ಅವರು ಮೇ 29 ರಂದು ಮೃತಪಟ್ಟಿದ್ದಾರೆ ಹೊರತು ಬೇರೆ ಯಾವುದೇ ಕಾರಣದಿಂದ ಅಲ್ಲ. ಆದರೆ ಮರಣೋತ್ತರ ಪರೀಕ್ಷೆಯ ವರದಿನ್ನು ನಿರೀಕ್ಷಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

error: Content is protected !!