ದಲಿತ ಸಂಘರ್ಷ ಸಮಿತಿಯಿಂದ ಶ್ರೀಶಕ್ತಿ ವೃದ್ಧಾಶ್ರಮದ ಬಂಧುಗಳಿಗೆ ಉಡುಪು ವಿತರಣೆ

May 31, 2020

ಮಡಿಕೇರಿ ಮೇ 31 : ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕೊಡಗು ಜಿಲ್ಲಾ ಘಟಕದ ವತಿಯಿಂದ ನಗರದ ಶ್ರೀಶಕ್ತಿ ವೃದ್ಧಾಶ್ರಮದಲ್ಲಿ ಸಂಧ್ಯಾಕಾಲದ ಬಂಧುಗಳಿಗೆ ಉಡುಪುಗಳನ್ನು ವಿತರಿಸಲಾಯಿತು. ಮಡಿಕೇರಿಯ ಸ್ತ್ರೀರೋಗ ತಜ್ಞೆರಾದ ಡಾ.ಸೌಮ್ಯಾ.ಡಿ, ಮಡಿಕೇರಿ ಗ್ರಾಮಾಂತರ ಠಾಣಾ ಪೋಲೀಸ್ ವೃತ್ತ ನಿರೀಕ್ಷಕ ದಿವಾಕರ್, ಪದವಿ ಕಾಲೇಜಿನ ಪ್ರಾಧ್ಯಾಪಕರಾದ ನಿರ್ಮಲಾ, ದಸಂಸ ಜಿಲ್ಲಾ ಸಂಚಾಲಕ ದಿವಾಕರ್ ಹೆಚ್.ಎಲ್, ಸಂಘಟನಾ ಸಂಚಾಲಕ ಶಿವಕುಮಾರ್, ತಾಲ್ಲೂಕು ಸಂಚಾಲಕ ದೀಪಕ್ ಎ.ಪಿ, ಶ್ರೀಶಕ್ತಿ ವೃದ್ಧಾಶ್ರಮದ ಮೇಲ್ವಿಚಾರಕ ಸತೀಶ್ ಹಾಜರಿದ್ದರು. ಅತಿಥಿ ಗಣ್ಯರು ವಯೋವೃದ್ಧರ ಸ್ಥಿತಿ ಗತಿ ಮತ್ತು ಆರೋಗ್ಯ ಸಂರಕ್ಷಣೆಯ ಕುರಿತು ಸಲಹೆಗಳನ್ನು ನೀಡಿದರು.