ಮೋದಿಯವರ ಜೀವನಚರಿತ್ರೆ ಬಿಡುಗಡೆ

01/06/2020

ನವದೆಹಲಿ ಮೇ 31 : ಪ್ರಧಾನಿ ನರೇಂದ್ರ ಮೋದಿಯವರ ಬಾಲ್ಯದ ಅಪರೂಪದ ಸಂಗ್ರಾಹ್ಯ ಚಿತ್ರಗಳು, ಹೆಚ್ಚು ಪ್ರಸಿದ್ದವಲ್ಲದ ಉಪಾಖ್ಯಾನಗಳಿಂದ ಕೂಡಿರುವ ವ ಪ್ರಧಾನಿ ನರೇಂದ್ರ ಮೋದಿಯವರ ಹೊಸ ಜೀವನಚರಿತ್ರೆ ಬಿಡುಗಡೆಯಾಗಿದೆ.
“Narendra Modi-Harbinger of Prosperity & Apostle of World Peace”, ಎನ್ನುವ ಹೆಸರಿನ ಪುಸ್ತಕವನ್ನು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್ ಬಿಡುಗಡೆ ಮಾಡಿದ್ದಾರೆ.
ಲಾಕ್‍ಡೌನ್ ಮಧ್ಯೆ, ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಶುಕ್ರವಾರ ಅಂತರ್ಜಾಲದಲ್ಲಿ ಆಯೋಜಿಸಲಾಗಿದ್ದು ಭಾರತ ಮತ್ತು ಯುಎಸ್ ಎರಡೂ ರಾಷ್ಟ್ರಗಳಲ್ಲಿನ ಗಣ್ಯರು ಈ ವೇಳೆ ಹಾಜರಿದ್ದರು.
ಇಂಟನ್ರ್ಯಾಷನಲ್ ಕೌನ್ಸಿಲ್ ಆಫ್ ಜ್ಯೂರಿಸ್ಟ್ಸ್ ಅಧ್ಯಕ್ಷ ಮತ್ತು ಅಖಿಲ ಭಾರತ ಬಾರ್ ಅಸೋಸಿಯೇಶನ್ ಅಧ್ಯಕ್ಷ ಆದಿಶ್ ಸಿ ಅಗರ್‍ವಾಲಾ, ಮೆರಿಕಾದ ಲೇಖಕ ಮತ್ತು ಕವಿ ಎಲಿಸಬೆತ್ ಹೊರಾನ್ ಜತೆಯಾಗಿ ಈ ಪುಸ್ತಕ ಬರೆದಿದ್ದು “ಮೋದಿಯವರ ಬಾಲ್ಯ ಮತ್ತು ಆರಂಭಿಕ ಜೀವನದ ಅಪರೂಪದ ಛಾಯಾಚಿತ್ರಗಳು ಜೀವನಚರಿತ್ರೆಯು ಚಹಾವನ್ನು ಮಾರಿದ ಹುಡುಗನೊಬ್ಬ ಎರಡನೇ ಬಾರಿ ದೇಶದ ಪ್ರಧಾನಿಯಾದವರೆಗೆ ಜೀವನವನ್ನು ಅದ್ಭುತವಾಗಿ ಚಿತ್ರಿಸಿದೆ.