2003ರ ವಿದ್ಯುಚ್ಛಕ್ತಿ ಕಾಯ್ದೆಯಲ್ಲಿ ತಿದ್ದುಪಡಿಯನ್ನು ವಿರೋಧಿಸಿ ಸುಂಟಿಕೊಪ್ಪದಲ್ಲಿ ಪ್ರತಿಭಟನೆ

01/06/2020

ಮಡಿಕೇರಿ ಜೂ.1: 2003 ವಿದ್ಯುಚ್ಛಕ್ತಿ ಕಾಯ್ದೆಯಲ್ಲಿ ಕೇಂದ್ರ ಸರಕಾರ ಪ್ರಸ್ತಾಪಿಸಿರುವ ತಿದ್ದುಪಡಿಯಿಂದ ವಿದ್ಯುಚ್ಛಕ್ತಿ ನೌಕರರಿಗೆ ಮಾರಕವಾಗಲಿದ್ದು, ಈ ತಿದ್ದುಪಡಿಯನ್ನು ಕೈಬಿಡುವಂತೆ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಬೇಕೆಂದು ಸುಂಟಿಕೊಪ್ಪ ವಿದ್ಯುಚ್ಛಕ್ತಿ ಮಂಡಳಿ ಅಸೋಷಿಯೇನ್ ಒಕ್ಕೂಟದ ಉದ್ಯೋಗಿಗಳು ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಿ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ವಿದ್ಯುಚ್ಛಕ್ತಿ ಒಕ್ಕೂಟದ ಕಾರ್ಮಿಕ ಸಂಘಟನೆಯ ಕ.ವಿ.ಮಂ ನೌಕರರ ಸಂಘದ ಪ್ರಾಥಮಿಕ ನಿರ್ದೇಶಕರಾದ ಆರ್.ನಾಗರಾಜು, ಶಿವಕುಮಾರ್, ನರೇಂದ್ರ ಸಮ್ಮುಖದಲ್ಲಿ ಒಕ್ಕೂಟದ ಪದಾಧಿಕಾರಿಗಳು,ರಮೇಶ್ ವಿಜಯ್ ಬನ್ಸೂರ್ ಬಹ್ದೂರ್‍ಹೊಳೆ ಇಂಜಿನೀಯರ್, ಕಾರ್ಯ ಮತ್ತು ಪಾಲನ ವಿಭಾಗದ ಸುಂಟಿಕೊಪ್ಪ,ಮಾದಾಪುರ,ಚೆಟ್ಟಳ್ಳಿ ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.