ನಗರಸಭೆ ಪೌರಾಯುಕ್ತರಾಗಿ ಪಿ.ಶ್ರೀನಿವಾಸ್ ಅಧಿಕಾರ ಸ್ವೀಕಾರ

01/06/2020

ಮಡಿಕೇರಿ ಜೂ.01 : ನಗರಸಭೆ ಪೌರಾಯುಕ್ತರಾಗಿ ಪಿ.ಶ್ರೀನಿವಾಸ್ ಅವರು ಅಧಿಕಾರ ವಹಿಸಿಕೊಂಡಿದ್ದಾರೆ. ಇದುವರೆಗೆ ಪೌರಾಯುಕ್ತರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಎಂ.ಎಲ್.ರಮೇಶ್ ಅವರು ವಯೋನಿವೃತ್ತಿ ಹೊಂದಿದ್ದು, ಅವರಿಂದ ಅಧಿಕಾರ ವಹಿಸಿಕೊಂಡಿದ್ದಾರೆ.
ಪಿ.ಶ್ರೀನಿವಾಸ್ ಅವರು ಭೂ ದಾಖಲೆಗಳ ಉಪ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಹೆಚ್ಚುವರಿಯಾಗಿ ನಗರಸಭೆ ಪೌರಾಯುಕ್ತರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.