ಆಶ್ರಮ ಶಾಲೆಗಳ ಉದ್ಯೋಗಿಗಳಿಗೆ ಶಾಸಕ ಕೆ.ಜಿ.ಬೋಪಯ್ಯರಿಂದ ಆಹಾರ ಕಿಟ್ ವಿತರಣೆ

01/06/2020

ಮಡಿಕೇರಿ ಜೂ. 1 : ಸಮಗ್ರ ಗಿರಿಜನ ಉಪಯೋಜನೆ ಇಲಾಖೆ ವತಿಯಿಂದ ವಿರಾಜಪೇಟೆ ತಾಲ್ಲೂಕಿನ ಆಶ್ರಮ ಶಾಲೆಗಳ ಉದ್ಯೋಗಿಗಳಿಗೆ ಆಹಾರ ಕಿಟ್ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಶಾಸಕರಾದ ಕೆ.ಜಿ.ಬೋಪಯ್ಯ ಅವರು ಟಾರ್ಪಲ್ ವಿತರಿಸಿದರು.
ಹಾಗೆಯೇ ವಿಕಲಚೇತನರು ಹಾಗೂ ಇತರರಿಗೆ ರೆಡ್‍ಕ್ರಾಸ್ ಸಂಸ್ಥೆಯಿಂದ ದಿನಬಳಕೆ ವಸ್ತುಗಳ ಕಿಟ್‍ನ್ನು ಪೊನ್ನಂಪೇಟೆಯ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಶಾಸಕರಾದ ಕೆ.ಜಿ.ಬೋಪಯ್ಯ ಅವರು ವಿತರಿಸಿದರು.
ಐಟಿಡಿಪಿ ಇಲಾಖಾ ಅಧಿಕಾರಿ ಸಿ.ಶಿವಕುಮಾರ್, ತಹಶೀಲ್ದಾರ್ ನಂದೀಶ್, ವಿರಾಜಪೇಟೆ ತಾಲ್ಲೂಕು ಐಟಿಡಿಪಿ ಅಧಿಕಾರಿ ಗುರುಶಾಂತಪ್ಪ ಇತರರು ಇದ್ದರು.
ಅರ್ಚಕರಿಗೆ ಆಹಾರ ಕಿಟ್ ವಿತರಣೆ: ಕೋವಿಡ್-19 ಲಾಕ್‍ಡೌನ್ ಹಿನ್ನೆಲೆ ವಿರಾಜಪೇಟೆ ತಾಲ್ಲೂಕಿನ 40 ದೇವಸ್ಥಾನಗಳ ಅರ್ಚಕರಿಗೆ ಆಹಾರ ಕಿಟ್‍ನ್ನು ಶಾಸಕರಾದ ಕೆ.ಜಿ.ಬೋಪಯ್ಯ ಅವರು ಸೋಮವಾರ ವಿರಾಜಪೇಟೆ ತಾಲ್ಲೂಕು ಕಚೇರಿಯಲ್ಲಿ ವಿತರಿಸಿದರು.