ಬಂಡಾಯದ ಬಗ್ಗೆ ತಲೆಕೆಡಿಸಿಕೊಳ್ಳದ ಸಿಎಂ

02/06/2020

ಬೆಂಗಳೂರು ಜೂ.1 : ಕೋವಿಡ್ ನಿಯಂತ್ರಣ ನನ್ನ ಕೆಲಸ ಅದರಲ್ಲಿ ನಿರತನಾಗಿದ್ದೇನೆ, ಬೇರೆ ವಿಷಯದ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಬಿಜೆಪಿ ಪಕ್ಷದಲ್ಲಿ ಉಂಟಾಗಿರುವ ಬಂಡಾಯದ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ.
ಕೇಂದ್ರ ಸರ್ಕಾರಕ್ಕೆ ಒಂದು ವರ್ಷ ಪೂರ್ತಿಯಾದ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಪ್ರಧಾನಿ ಮೋದಿ ಅವರಿಗೆ ಅಭಿನಂದನೆ ಸಲ್ಲಿಸಿದ ಯಡಿಯೂರಪ್ಪ, ತಮ್ಮ ಭಾಷಣದುದ್ದಕ್ಕೂ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಮೋದಿ ಅವರ ಗುಣಗಾನ ಮಾಡಿದ ಯಡಿಯೂರಪ್ಪ, ಕೆಲ ಬಿಜೆಪಿ ನಾಯಕರು ಯಡಿಯೂರಪ್ಪ ನಮ್ಮ ನಾಯಕರಲ್ಲ ಎನ್ನುವ ಹೇಳಿಕೆಗೆ ಪ್ರತಿಕ್ರಿಯೆ ನೀಡುವುದಿಲ್ಲ. ಇಡೀ ದೇಶದಲ್ಲೇ ಆರ್ಥಿಕ ಸಮಸ್ಯೆ ಇದೆ ಹಾಗಾಗಿ ಅನುದಾನ ಕಡಿಮೆ ಬಿಡುಗಡೆ ಆಗಿದೆ. ಮುಂದೆ ಆರ್ಥಿಕ ಸ್ಥಿತಿ ಸರಿಯಾಗುವ ವಿಶ್ವಾಸವಿದೆ. ಮುಂದೆ ಹೆಚ್ಚು ಅನುದಾನ ಸಿಗುವ ನಿರೀಕ್ಷೆ ಇದೆ ಎಂದರು.
ಮಹಾಮಾರಿ ಕೋರನಾದಿಂದ ದೇಶಕ್ಕೆ ರಕ್ಷಣೆ ನೀಡುವಲ್ಲಿ ಪ್ರಧಾನಿ ಯಶಸ್ವಿಯಾಗಿದ್ದಾರೆ. ದೇಶದ ಜನರ ಜೀವ, ಜೀವನ ರಕ್ಷಣೆ ಮಾಡಿದಕೀರ್ತಿ ಮೋದಿ ಅವರಿಗೆ ಸಲ್ಲಲಿದೆ. ಕೊರೊನಾಗೆ 20 ಲಕ್ಷ ಕೋಟಿ ಪ್ಯಾಕೇಜ್ ನೀಡಿದ್ದಾರೆ. 8 ಲಕ್ಷ ಆಹಾರ ಪದಾರ್ಥಗಳನ್ನು ರಾಜ್ಯಕ್ಕೆ ನೀಡಿದ್ದಾರೆ. ರಾಜ್ಯ ಕೂಡ 1610 ಕೋಟಿ, ರೂ. ಪ್ಯಾಕೇಜ್ ಘೋಷಣೆ ಮಾಡಿದೆ. ಇದಾದ ಬಳಿಕ 137ಕೋಟಿ, ಮತ್ತೆ 500 ಕೋಟಿ ಮೂರು ಪ್ಯಾಕೇಜ್ ನೀಡಿದೆ ಎಂದು ತಿಳಿಸಿದರು.