ಅರೆಸೈನಿಕ ಕ್ಯಾಂಟೀನ್ ನಲ್ಲಿ ಸ್ವದೇಶಿ ಉತ್ಪನ್ನ

02/06/2020

ನವದೆಹಲಿ ಜೂ.1 : ಸ್ವದೇಶಿ ಉತ್ಪನ್ನಗಳನ್ನು ಪ್ರೋತ್ಸಾಹಿಸಲು ಕೇಂದ್ರೀಯ ಪೊಲೀಸ್ ಕಲ್ಯಾಣ ಭಂಡಾರ (ಕೆಪಿಕೆಬಿ)ದಿಂದ ನಡೆಯುವ ಅರೆಸೈನಿಕ ಪಡೆಗಳ ಕ್ಯಾಂಟೀನ್ ಗಳಲ್ಲಿ 1000 ಕ್ಕೂ ಹೆಚ್ಚಿನ ಆಮದು ಉತ್ಪನ್ನಗಳನ್ನು ಕೈಬಿಡಲಾಗಿದೆ.
ಮೈಕ್ರೋ ವೇವ್ ಓವೆನ್, ಫುಟ್ ವೇರ್, ಟಾಮಿ ಹಿಲ್ ಫಿಗರ್ ಶರ್ಟ್ ಗಳಂತಹ ಬ್ರಾಂಡೆಡ್ ಶರ್ಟ್ ಗಳ ಉತ್ಪನ್ನಗಳನ್ನೂ ಸೇರಿ ಒಟ್ಟಾರೆ 1000 ಕ್ಕೂ ಹೆಚ್ಚು ಆಮದು ಉತ್ಪನ್ನಗಳಿಗೆ ಕೆಪಿಕೆಬಿ ಕ್ಯಾಂಟೀನ್ ಗಳಲ್ಲಿ ಕಡಿವಾಣ ಹಾಕಲಾಗಿದೆ.
ಜೂ.1 ರಿಂದ ಸ್ವದೇಶಿ ಉತ್ಪನ್ನಗಳನ್ನು ಮಾತ್ರ ಇಲ್ಲಿ ಮಾರಾಟ ಮಾಡಲು ನಿರ್ಧರಿಸಲಾಗಿದೆ. ಕೇಂದ್ರ ಗೃಹ ಸಚಿವಾಲಯ ಕೆಪಿಕೆಬಿ ಕ್ಯಾಂಟೀನ್ ಗಳಲ್ಲಿ ದೇಶಿ ಉತ್ಪನ್ನಗಳನ್ನು ಮಾರಾಟ ಮಾಡಬೇಕೆಂಬ ಸೂಚನೆ ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಾಲಾಗಿದೆ. ಇವೆಲ್ಲದರ ಹೊರತಾಗಿ ಸ್ಕೇಚೆರ್ಸ್, ಫೆರೆರೊ, ರೆಡ್ ಬುಲ್, ವಿಕ್ಟ್ರೋನೆಕ್ಸ್?, ಸಫೀಲೋ (ಪೊಲಾರೈಡ್ ಕ್ಯಾರೆರಾ) ಸೇರಿ ಏಳು ಕಂಪನಿಗಳಿಂದ ಆಮದು ಮಾಡಿಕೊಳ್ಳುತ್ತಿದ್ದ ಉತ್ಪನ್ನಗಳನ್ನು ತೆಗೆದುಹಾಕಲಾಗಿದೆ.