ಸಾಮೂಹಿಕ ವಿವಾಹ ಸ್ಥಗಿತ : ಅಗತ್ಯ ಸಾಮಾಗ್ರಿ ಮನೆಗಳಿಗೆ ತಲುಪಿಸಲು ನಿರ್ಧಾರ

02/06/2020

ಮಡಿಕೇರಿ ಜೂ.2 : ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ವತಿಯಿಂದ ಏಪ್ರಿಲ್‍ನಲ್ಲಿ ನಡೆಯಬೇಕಿದ್ದ ಏಳು ಮಂದಿ ಬಡ ಕನ್ಯೆಯರ ಸಾಮೂಹಿಕ ವಿವಾಹ ಸಮಾರಂಭ ಕೊರೋನಾ ಲಾಕ್‍ಡೌನ್‍ನಿಂದಾಗಿ ಸ್ಥಗಿತಗೊಂಡಿದೆ. ಈ ಹಿನ್ನೆಲೆಯಲ್ಲಿ ಸಂಘಟನೆಯ ವತಿಯಿಂದ ಸರಳ ವಿವಾಹಕ್ಕೆ ಅನುಕೂಲವಾಗುವಂತೆ ಚಿನ್ನಾಭರಣ ಸೇರಿದಂತೆ ಅಗತ್ಯ ನೆರವನ್ನು ಅವರವರ ಮನೆಗಳಿಗೆ ತಲುಪಿಸಲಾಗುವುದೆಂದು ಸಂಘಟನೆಯ ಉಪಾಧ್ಯಕ್ಷ ಎ.ಎಂ.ಹಂಸ ತಿಳಿಸಿದ್ದಾರೆ.