ಪ್ಲಾಸ್ಮಾ ಥೆರಪಿ ಚಿಕಿತ್ಸೆ ಯಶಸ್ವಿ

03/06/2020

ಹುಬ್ಬಳ್ಳಿ ಜೂ.2 : ರಾಜ್ಯದದಲ್ಲಿ ಪ್ರಥಮ ಬಾರಿಗೆ ಕೊರೋನಾವರಸ್ ಸೋಂಕಿಗಾಗಿ ನಡೆಸಲಾದ ಪ್ಲಾಸ್ಮಾ ಥೆರಪಿ ಚಿಕಿತ್ಸಾ ವಿಧಾನ ಯಶಸ್ವಿಯಾಗಿದ್ದು 64 ವರ್ಷದ ಕೊರೊನಾ ಸೋಂಕಿತ ಸಂಪೂರ್ಣ ಗುಣಮುಖನಾಗಿದ್ದಾನೆ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ವೈದ್ಯರು ಈ ಸಾಧನೆ ಮಾಡಿದ್ದಾರೆ.
ಹುಬ್ಬಳ್ಳಿಯ ಕಿಮ್ಸ್ ನಲ್ಲಿ ನಡೆದ ಪ್ಲಾಸ್ಮಾ ಥೆರಪಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು ಈ ಸಂಬಂಧ ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ ಸುದ್ದಿಗೋಷ್ಠಿ ನಡೆಸಿ ಮಾಹಿತಿ ಒದಗಿಸಿದ್ದಾರೆ.
ಈ ಹಿಂದೆ ಹುಬ್ಬಳ್ಳಿಯಲ್ಲಿ ದಾಖಲಾಗಿ ಕೋವಿಡ್ ಸೋಂಕಿನಿಂದ ಗುಣಮುಖನಾಗಿದ್ದ ರೋಗಿ ಸಂಖ್ಯೆ 363 ಅವರ ಮನವೊಲಿಸಿ ಅವರಿಂದ ಪಾಸ್ಮಾ ಪಡೆದು ಮುಂಬೈನಿಂದ ಆಗಮಿಸಿದ್ದ 64 ವರ್ಷದ ವ್ಯಕ್ತಿಗೆ ಅಳವಡಿಸಿ ಚಿಕಿತ್ಸೆ ನೀಡಲಾಗಿದೆ.
ಪ್ಲಾಸ್ಮಾ ಥೆರಪಿ ನಡೆಸಲು ಕಿಮ್ಸ್ ಗೆ ಐಸಿಎಂಆರ್ ಅನುಮತಿ ನೀಡಿತ್ತು. ಅದರ ಅನುಸಾರ ಆಸ್ಪತ್ರೆ ಚಿಕಿತ್ಸೆ ನೀಡಲು ಎಲ್ಲಾ ತಯಾರಿ ನಡೆಸಿ ದಾನಿಗಳಿಂದ ಪ್ಲಾಸ್ಮಾ ಪಡೆಯುವುದಕ್ಕೆ ಮುಂದಾಗಿತ್ತು. ಪ್ರಾರಂಭದಲ್ಲಿ ಕೋವಿಡ್ ಸೋಂಕಿನಿಂದ ಗುಣ ಹೊಂದಿದ ರೋಗಿಗಳು ಪ್ಲಾಸ್ಮಾ ದಾನಕ್ಕೆ ಹಿಂದೇಟು ಹಾಕಿದ್ದರು. ಆಗ ವೈದ್ಯರ ತಂಡ ಅವರ ಮನವೊಲಿಸಿ ಪ್ಲಾಸ್ಮಾ ಪಡೆದು ಚಿಕಿತ್ಸೆ ನೀಡಿದ್ದು ಇದೀಗ ಯಶಸ್ವಿಯಾಗಿದೆ.