ಎಸ್‌ಕೆಎಸ್‌ಎಸ್‌ಎಫ್ ನಿಂದ ಅರಪಟ್ಟುವಿನಲ್ಲಿ ರಸ್ತೆ ಶುಚೀಕರಣ ಹಾಗೂ ಬೀದಿ ದೀಪ ಅಳವಡಿಕೆ

03/06/2020

ಮಡಿಕೇರಿ ಜೂ. 3 :  ಎಡಪಲಾ  ಎಸ್. ಕೆ. ಎಸ್.ಎಸ್.ಎಫ್ ವಿಖಾಯ ಹಾಗೂ ಎಸ್.ವೈ .ಎಸ್ ಸಂಘಟನೆಗಳ ವತಿಯಿಂದ ಬಾವಲಿ ಜಂಕ್ಷನ್ ನಿಂದ ಅರಪಟ್ಟು ಚುಟಾನ್ ಕಂಡಿ ಸೇತುವೆ ವರೆಗಿನ 3ಕಿಲೋಮೀಟರ್ ರಸ್ತೆಯ ಚರಂಡಿಗಳನ್ನು ಶುಚಿಗೊಳಿಸಲಾಯಿತು.
ರಸ್ತೆಯ  ಬದಿಯ ಕಾಡುಗಳನ್ನು ಕಡಿದು, ಗ್ರಾಮದ ಕೆಲವು  ಕಡೆ ಬೀದಿ‌‌ ದೀಪ ಅಳವಡಿಸಿ ಮಳೆಗಾಲ ಆರಂಭಕ್ಕೂ ಮುನ್ನ ಜನರಿಗೆ ಹಾಗೂ ವಾಹನ ಸವಾರರಿಗೆ , ಸಾಂಕ್ರಾಮಿಕ ರೋಗಗಳು  ಹರಡದಂತೆ ಶುಚಿತ್ವ ಮಾಡಲಾಯಿತು.
 ಹಲವಾರು ವರ್ಷಗಳ ಸತತ ಪ್ರಯತ್ನದ ನಂತರ‌ ಗ್ರಾಮಸ್ಥರಿಗೆ ದೊರೆತ  ಒಳ್ಳೆಯ ರಸ್ತೆಯನ್ನು ಹಾಳಾಗದಂತೆ ,ಚರಂಡಿ ಶುಚಿಗೊಳಿಸಿ  ನೀರು ಚರಂಡಿಗೆ ಹೋಗುವ ವ್ಯವಸ್ಥೆ ಮಾಡಿ, ಗ್ರಾಮಸ್ಥರಿಗೆ ಶುಚಿತ್ವ ಬಗ್ಗೆ ಮನವರಿಕೆ ಮಾಡಲಾಯಿತು.
ಮುಂಜಾನೆ  ಎಸ್ .ವೈ .ಎಸ್ ನಿರ್ದೇಶಕರಾದ ಅಬ್ದುಲ್ ಖಾದರ್ ಫೈಝಿಯವರು ಪ್ರಾರ್ಥನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದ ಎಡಪಲಾ ಎಸ್.ಕೆ. ಎಸ್.ಎಸ್.ಎಫ್ ಅಧ್ಯಕ್ಷ ಶಹೀದ್ ಫೈಜಿ,  ಉಪಾಧ್ಯಕ್ಷ ಹಾರಿಸ್ ಬಾಖವಿ,  ಕಾರ್ಯದರ್ಶಿ ಹನೀಫ ಫೈಜಿ,  ಕೋಶಾಧಿಕಾರಿ ರಫೀಕ್ ಕೆ ಪಿ,  ಸಿನಾನ್ ಎಸ್.ಎಸ್, ವಿಖಾಯದ ಸದಸ್ಯರಾದ ಹನೀಫ ವೈ.ಎಚ್.  ಎಸ್.ವೈ.ಎಸ್ ಅಧ್ಯಕ್ಷ  ಮಜೀದ್ ಉಸ್ತಾದ್ .,  ಉಪಾಧ್ಯಕ್ಷ ಕೆ.ಯು ಈಸ, ಕಾರ್ಯದರ್ಶಿ ಅಬೂಬಕ್ಕರ್ ಉಸ್ತಾದ್,  ಕೆ.ಯು ಉಸ್ಮಾನ್, ರಾಷ್ಟ್ರಪತಿ ಪದಕ ಪಡೆದ ನಿವೃತ ಪೊಲೀಸ್ ಇನ್ಸ್ಪೆಕ್ಟರ್ ಕೆ.ಎಮ್ ಹಂಝ, ಎಸ್. ಕೆ.ಎಸ್.ಎಸ್.ಎಸ್ ಬೆಂಗಳೂರು ಜಿಲ್ಲಾ ಕೋಶಾಧಿಕಾರಿ ಸಲೀಂ ಎಂ.ಎ,  ಎನ್.ಹೆಚ್.ವೈ.ಎ  ರಶೀದ್ ಕೆ.ಎ ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.