463 ಸಂತ್ರಸ್ಥರಿಗೆ ಜೂ. 4 ರಂದು ಮನೆಗಳ ಹಸ್ತಾಂತರ

03/06/2020

ಮಡಿಕೇರಿ ಜೂ. 3 : ಕೊಡಗು ಜಿಲ್ಲೆಯಲ್ಲಿ 2018ನೇ ಸಾಲಿನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಮನೆ ಕಳೆದುಕೊಂಡ 463 ಸಂತ್ರಸ್ಥರಿಗೆ ಸರ್ಕಾರದಿಂದ 9.85 ಲಕ್ಷ ವೆಚ್ಚದಲ್ಲಿ ಜಿಲ್ಲೆಯ ಮದೆ ಮತ್ತು ಜಂಬೂರು ಗ್ರಾಮಗಳಲ್ಲಿ ಸುಸಜ್ಜಿತ ಬಡಾವಣೆಯೊಂದಿಗೆ 556 ಚದರ ಅಡಿಗಳಲ್ಲಿ ನಿರ್ಮಿಸಲಾದ 02 ಬೆಡ್ ರೂಂ ಗಳ ಮನೆಯನ್ನು ಜೂ. 4 ರಂದು ವಸತಿ ಸಚಿವರು ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಕಂದಾಯ ಸಚಿವರು ಹಸ್ತಾಂತರಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.

ಕರ್ಣಂಗೇರಿ ಗ್ರಾಮದಲ್ಲಿ ನಿರ್ಮಿಸಿದ 35 ಮನೆಗಳನ್ನು ಈಗಾಗಲೇ ಅರ್ಹ ಸಂತ್ರಸ್ಥರಿಗೆ ಹಸ್ತಾಂತರಿಸಲಾಗಿದೆ. ಅಲ್ಲದೆ ಸ್ವಂತ ಜಾಗದಲ್ಲಿ ಮನೆ ನಿರ್ಮಿಸಿಕೊಳ್ಳಲು ಇಚ್ಛಿಸಿದ 65 ಫಲಾನುಭವಿಗಳಿಗೆ ತಲಾ 9.85 ಲಕ್ಷ ಮೊತ್ತವನ್ನು ಪಾವತಿಸಲಾಗಿದೆ. ಹೀಗಾಗಿ ಒಟ್ಟು 563 ಸಂತ್ರಸ್ಥರಿಗೆ ಮುಖ್ಯಂತ್ರಿಗಳ ಪರಿಹಾರ ನಿಧಿಯಿಂದ ಸುಸಜ್ಜಿತ ಬಡಾವಣೆಯೊಂದಿಗೆ ಮನೆಗಳನ್ನು ನೀಡಲಾಗಿದೆ ಎಂದರು.