ಗಡಿಭಾಗ ಕುಟ್ಟದಲ್ಲಿ ಚಿರತೆ ಪ್ರತ್ಯಕ್ಷ : ಗ್ರಾಮಸ್ಥರಲ್ಲಿ ಆತಂಕ

03/06/2020

ಮಡಿಕೇರಿ ಜೂ 3 : ಗಡಿಭಾಗ ಕುಟ್ಟದ ಅನುಗ್ರಹ ಪೆಟ್ರೋಲ್ ಪಂಪ್ ಬಳಿ ಚಿರತೆಯೊಂದು ಪ್ರತ್ಯಕ್ಷವಾಗಿ ಸಾರ್ವಜನಿಕರಲ್ಲಿ ಆತಂಕವನ್ನು ಸೃಷ್ಟಿಸಿದೆ.
ರಾತ್ರಿ ವೇಳೆ ಸುಮಾರು 3 ಗಂಟೆಯ ಸಂದರ್ಭ ಗ್ರಾಮದ ಸೂರ್ಯ ಎಂಬವರು ಸಾಕಿದ ಕೋಳಿಯನ್ನು ಕೊಂದು ಹಾಕಿದ್ದು, ಹುಲಿ ಎಂಬ ಶಂಕೆ ವ್ಯಕ್ತಪಡಿಸಲಾಗಿತ್ತು. ಸ್ಥಳಕ್ಕೆ ನಾಗರಹೊಳೆ ಅರಣ್ಯಧಿಕಾರಿ ಆರ್‍ಎಫ್‍ಓ ಅಮಿತ್ ಹಾಗೂ ಅರಣ್ಯ ವಾರ್ಡನ್ ಬೋಸ್ ಮಾದಪ್ಪ ಆಗಮಿಸಿ ಹೆಜ್ಜೆ ಗುರುತಿನ ಮೂಲಕ ಚಿರತೆ ಎಂದು ಸ್ಪಷ್ಟಪಡಿಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.