ರಾಜಸ್ತಾನ ರಾಜ್ಯದ ಗಡಿಗಳು ಬಂದ್

11/06/2020

ಜೈಪುರ ಜೂ.10 : ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಒಂದು ವಾರದ ಮಟ್ಟಿಗೆ ರಾಜಸ್ತಾನ ಸರ್ಕಾರ ರಾಜ್ಯ ಎಲ್ಲಾ ಗಡಿಗಳನ್ನು ಬಂದ್ ಮಾಡಿದೆ.
ಈ ಕುರಿತು ಆದೇಶ ಹೊರಡಿಸಿರುವ ರಾಜಸ್ಥಾನ ಸರ್ಕಾರ, ಎನ್‍ಒಸಿ ಪ್ರಮಾಣಪತ್ರವಿಲ್ಲದೆಯೇ ಯಾರೊಬ್ಬರೂ ರಾಜ್ಯ ಪ್ರವೇಶಿಸುವಂತಿಲ್ಲ. ಅಲ್ಲದೆ, ಪಾಸ್ ಗಳಿಲ್ಲದೆ, ರಾಜ್ಯದಿಂದ ಯಾರೊಬ್ಬರೂಕೂಡ ಹೊರ ಹೋಗುವಂತಿಲ್ಲ ಎಂದು ತಿಳಿಸಿದೆ.
ಆದೇಶ ಕುರಿತು ಈಗಾಗಲೇ ಐಜಿ, ಎಸ್’ಪಿ, ಪೊಲೀಸ್ ಆಯುಕ್ತರು, ಉಪ ಆಯುಕ್ತರಿಗೆ ಸೂಚನೆ ನೀಡಿರುವ ಸರ್ಕಾರ ಗಡಿಯಲ್ಲಿ ಎಲ್ಲಾ ರೀತಿಯ ಭದ್ರತೆ ಹಾಗೂ ತಪಾಸಣಾ ಕಾರ್ಯಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದಾರೆ. ಮುಂದಿನ 7 ದಿನಗಳ ಕಾಲ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಿದೆ ಎಂದು ತಿಳಿದುಬಂದಿದೆ.
ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ಆಯುಕ್ತರಿಗೆ ಪಾಸ್ ವಿತರಿಸುವ ಹೊಣೆಯನ್ನು ನೀಡಲಾಗಿದ್ದು, ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಹಾಗೂ ಸಾವಿಗೀಡಾದ ಕುಟುಂಬಸ್ಥರಿಗೆ ಆದೇಶದಲ್ಲಿ ವಿನಾಯಿತಿ ನೀಡಲಾಗಿದೆ.