ಮಡಿಕೇರಿ ಸಂತ ಮೈಕೆಲರ ಚರ್ಚ್ ಆವರಣದ ‘ಭಾತೃತ್ವ’ ಭವನ ಉದ್ಘಾಟನೆ

June 11, 2020

ಮಡಿಕೇರಿ ಜೂ.11 : ಮಡಿಕೇರಿಯ ಸಂತ ಮೈಕೆಲರ ಚರ್ಚ್ ಆವರಣದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ‘ಭಾತೃತ್ವ’ ಭವನವನ್ನು ಮೈಸೂರು ಧರ್ಮಕ್ಷೇತ್ರದ ಬಿಷಪ್ ಡಾ. ಕೆ.ಎ. ವಿಲಿಯಂ , ನಿವೃತ್ತ ಬಿಷಪ್ ಥಾಮಸ್ ವಾಳಪಳ್ಳಿ ಅವರುಗಳು ಉದ್ಘಾಟಿಸಿದರು.
ಚರ್ಚ್ ಆವರಣದಲ್ಲಿ ನಿರ್ಮಿಸಲಾದ ಚರ್ಚ್‍ನ ಧರ್ಮ ಗುರುಗಳ ವಸತಿ, ಸಭಾಂಗಣ ಒಳಗೊಂಡ ಭವನವನ್ನು ಉದ್ಘಾಟಿಸಿ, ವಿಶೇಷ ಪ್ರಾರ್ಥನೆಯನ್ನು ನೆರವೇರಿಸಲಾಯಿತು. ಇದೇ ಸಂದರ್ಭ ಚರ್ಚ್ ವಾಣಿಜ್ಯ ಸಂಕೀರ್ಣದ ಮೇಲ್ಭಾಗದ ನೂತನ ಭವನವನ್ನು ಪೊಲೀಸ್ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಉದ್ಘಾಟಿಸಿದರು.
ಸಮಾರಂಭದಲ್ಲಿ ಧರ್ಮಗುರು ಲೆಸ್ಲಿ ಮೋರಸ್, ಕೊಡಗು ವಲಯದ ಧರ್ಮ ಗುರುಗಳಾದ ಫಾದರ್ ಮದಲೈ ಮುತ್ತು ಹಾಗೂ ಫಾದರ್ ಆಲ್ ಫ್ರೆಡ್, ಫಾದರ್ ನವೀನ್, ಚರ್ಚ್‍ನ ಸಲಹಾ ಸಮಿತಿ ಸದಸ್ಯರು, ಕನ್ಯಾ ಸ್ತ್ರೀಯರು, ಭಕ್ತಾದಿಗಳು ಪಾಲ್ಗೊಂಡಿದ್ದರು.

error: Content is protected !!