ಉಡುಪಿಯಲ್ಲಿ ವಿವಿಧ ಸ್ವ ಉದ್ಯೋಗ ತರಬೇತಿಗಳು ಪ್ರಾರಂಭ

12/06/2020

ಮಡಿಕೇರಿ ಜೂ. 12 : ಧರ್ಮಸ್ಥಳದ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯ, ಶ್ರೀ ಧರ್ಮಸ್ಥಳದ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆ & ಕೆನರಾ ಬ್ಯಾಂಕ್‌ಗಳ ಸಹಯೋಗದೊಂದಿಗೆ ನಡೆಯುವ ಉಡುಪಿ ಬ್ರಹ್ಮಾವರ ರುಡ್ ಸೆಟ್ ಸಂಸ್ಥೆಯಲ್ಲಿ ಜು 2020 ರಿಂದ ಮಾರ್ಚ್ 2021ರ ವರೆಗೆ ಉಚಿತ ಊಟ-ವಸತಿಯೊಂದಿಗೆ ವಿವಿಧ ಸ್ವ ಉದ್ಯೋಗ ತರಬೇತಿಗಳು ಪ್ರಾರಂಭವಾಗಲಿದೆ.
೧೮ ವರ್ಷದಿಂದ ೪೫ ವರ್ಷದ ವಯೋಮಿತಿಯ ಆಕಾಂಕ್ಷಿಗಳು

https://forms.gle/ZhbrC85AsLv7Uhzh7

ಲಿಂಕ್ ಮೂಲಕ ತಕ್ಷಣ ಅರ್ಜಿ ಸಲ್ಲಿಸಿ ಸಂದರ್ಶನಕ್ಕೆ ಹಾಜರಾಗಬಹುದು.

ಉಚಿತವಾಗಿ ನೀಡುವ ತರಬೇತಿಗಳು
ಮಹಿಳಾ ಟೈಲರಿಂಗ್, ಹೈನುಗಾರಿಕೆ ಮತ್ತು ಎರೆಹುಳು ಗೊಬ್ಬರ ತಯಾರಿಕೆ, ಕೋಳಿ ಸಾಕಾಣಿಕೆ, ಮೊಬೈಲ್ ಫೋನ್ ರಿಪೇರಿ, ಮಹಿಳೆಯರ ಮತ್ತು ಪುರುಷರ ಬ್ಯೂಟಿಪಾರ್ಲರ್ ಮತ್ತು ಸೆಲೂನ್ ನಿರ್ವಹಣೆ, ಫೋಟೋಗ್ರಫಿ & ವಿಡಿಯೋಗ್ರಫಿ, ಇಲೆಕ್ಟ್ರಿಕ್ ಮೋಟಾರ್ ರಿವೈಂಡಿಂಗ್ , ಸಿ.ಸಿ ಕ್ಯಾಮರಾ ಅಳವಡಿಸುವಿಕೆ, ಕಂಪ್ಯೂಟರೈಜಡ್ ಅಕೌಂಟಿಂಗ್ GST, ಫಾಸ್ಟ್ ಪುಡ್ ತಯಾರಿಕೆ, ಎಸಿ & ರಫ್ರಿಜರೇಶನ್, ಉದ್ಯಮಶೀಲತಾ ಅಭಿವೃದ್ಧಿ-EDP, ಪೇಪರ್ ಮತ್ತು ಬಟ್ಟೆ ಚೀಲ ತಯಾರಿಕೆ, ಮಸಾಲೆ ಪುಡಿ, ಹಪ್ಪಳ ತಯಾರಿಕೆ, ಬಿದಿರಿನ ಅಲಂಕಾರಿಕ ವಸ್ತುಗಳನ್ನು ತಯಾರಿಸುವ ತರಬೇತಿ, ದ್ವಿಚಕ್ರ ವಾಹನಗಳ ರಿಪೇರಿ, ಅಲ್ಯೂಮಿನಿಯಂ ಫ್ಯಾಬ್ರಿಕೇಶನ್, ಜೇನು ಸಾಕಾಣಿಕೆ, ಕ್ಯಾಂಡಲ್, ಸೋಪ್, ಸೋಪ್ ಆಯಿಲ್, ಫಿನಾಯಿಲ್ ತಯಾರಿಕೆ, ಗ್ರಹೋಪಯೋಗಿ ವಿದ್ಯುತ್ ಉಪಕರಣ ಗಳ ದುರಸ್ತಿ ಹಾಗೂ ಇತರೆ 30 ತರಬೇತಿಗಳು ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ದೂ. ಸಂಖ್ಯೆ 0820-2563455 9449862808, ಸಮಯ: ಬೆಳಿಗ್ಗೆ 9 :30 ರಿಂದ ಸಂಜೆ 5:30 ವರೆಗೆ. ನಿರ್ದೆಶಕರು, ರುಡ್ ಸೆಟ್ ಸಂಸ್ಥೆ, 52ನೇ ಹೇರೂರು, ಬ್ರಹ್ಮಾವರ, ಉಡುಪಿ, ಉತ್ತರಕನ್ನಡ, ಶಿವಮೊಗ್ಗ ಜಿಲ್ಲೆಯ ಅಕಾಂಕ್ಷಿಗಳಿಗೆ ಮಾತ್ರ ಅವಕಾಶವಿರುತ್ತದೆ.