ಪೊಲೀಸ್ ಕಾನ್ಸೆಟೇಬಲ್ ವಿವಿಧ ಹುದ್ದೆಗೆ ಅರ್ಜಿ ಸಲ್ಲಿಸಲು ಕಾಲಾವಕಾಶ

12/06/2020

ಮಡಿಕೇರಿ ಜೂ.12 : ಪೊಲೀಸ್ ಇಲಾಖೆಯಲ್ಲಿ ಖಾಲಿಯಿರುವ ಪೊಲೀಸ್ ಕಾನ್ಸೆಟೇಬಲ್ ವೃಂದದ ವಿವಿಧ ಹುದ್ದೆಗಳ ನೇಮಕಾತಿಗೆ ಈಗಾಗಲೇ ಅರ್ಜಿ ಆಹ್ವಾನಿಸಲಾಗಿದ್ದು, ಪ್ರಸ್ತುತ ರಾಜ್ಯದಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಕೆಯ ದಿನಾಂಕವನ್ನು ವಿಸ್ತರಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪೆನ್ನೇಕರ್ ಅವರು ತಿಳಿಸಿದ್ದಾರೆ.
ವಿವರ ಇಂತಿದೆ: ಸಿಪಿಸಿ ಪುರುಷ ಮತ್ತು ಮಹಿಳಾ(ಕಲ್ಯಾಣ ಕರ್ನಾಟಕ) ವಿಭಾಗದ 558 ಹುದ್ದೆಗಳಿಗೆ ಮತ್ತು ಎಪಿಸಿ(ಪುರುಷ),(ಸಿಎಆರ್/ಡಿಎಆರ್) (ಕಲ್ಯಾಣ ಕರ್ನಾಟಕ) 444 ಹುದ್ದೆಗಳಿಗೆ ಜುಲೈ, 09 ಕಡೆ ದಿನವಾಗಿದ್ದು, ಜುಲೈ, 13 ಶುಲ್ಕ ಪಾವತಿಸಲು ಕಡೆಯ ದಿನವಾಗಿದೆ.
ಸಿಪಿಸಿ (ಪುರುಷ ಮತ್ತು ಮಹಿಳಾ) 2007 ಹುದ್ದೆಗಳಿಗೆ ಮತ್ತು ಎಪಿಸಿ(ಪುರುಷ) (ಸಿಎಆರ್/ಡಿಎಆರ್) 1005 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಜುಲೈ, 13 ಕೊನೆಯ ದಿನವಾಗಿದ್ದು, ಜುಲೈ, 15 ಶುಲ್ಕ ಪಾವತಿಸಲು ಕಡೆಯ ದಿನವಾಗಿದೆ.
ಸ್ಟೇ.ಆರ್.ಪಿ.ಸಿ(ಪುರುಷ ಮತ್ತು ಮಹಿಳಾ) (ಕೆಎಸ್‍ಆರ್‍ಪಿ) ಮತ್ತು (ಐಆರ್‍ಬಿ) 2,420 ಹುದ್ದೆಗಳಿಗೆ ಮತ್ತು ಸ್ಟೇ.ಆರ್.ಪಿ.ಸಿ.(ಪುರುಷ)(ಬ್ಯಾಂಡ್ಸ್‍ಮನ್) (ಕೆಎಸ್‍ಆರ್‍ಪಿ ಮತ್ತು ಐಆರ್‍ಬಿ) 252 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಜುಲೈ, 06 ಕೊನೆಯ ದಿನವಾಗಿದೆ. ಶುಲ್ಕ ಪಾವತಿಸಲು ಜುಲೈ, 08 ಕೊನೆಯ ದಿನವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪೆನ್ನೇಕರ್ ಅವರು ತಿಳಿಸಿದ್ದಾರೆ.