ಕೊಡಗಿನಲ್ಲಿ ಮಹಿಳಾ ಸಹಾಯವಾಣಿ ಆರಂಭ

12/06/2020

ಮಡಿಕೇರಿ ಜೂ.12 : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿಯಲ್ಲಿ ಜಿಲ್ಲಾ ಮಹಿಳಾ ಶಕ್ತಿ ಕೇಂದ್ರವು ಜಿಲ್ಲಾ ಮಟ್ಟದ ಸಂಪನ್ಮೂಲ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರಧಾನಮಂತ್ರಿ ಮಹಿಳಾ ಸಶಕ್ತಿಕರಣ ಯೋಜನೆಯಲ್ಲಿ ಒಂದೇ ಕಡೆ ಎಲ್ಲಾ ಸಹಾಯ ಸೇವೆ ನೀಡುವುದಾಗಿದ್ದು, ಮಹಿಳಾ ಸಬಲೀಕರಣ, ಉದ್ಯೋಗ, ಕೌಶಲ್ಯ ಅಭಿವೃದ್ಧಿ ತರಬೇತಿ, ಆಶ್ರಯ, ಕಾನೂನು ನೆರವು, ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ಕಾನೂನು ಮತ್ತು ಆಪ್ತ ಸಮಾಲೋಚನೆಯ ಕುರಿತಾದಂತಹ ಹೆಚ್ಚಿನ ಮಾಹಿತಿ, ಆರೋಗ್ಯಕ್ಕೆ ಸಂಬಂಧಿಸಿದ ಸೌಲಭ್ಯಗಳ ವಿವರ, ವಿವಿಧ ಇಲಾಖೆಯ ಯೋಜನೆಗಳು ಮತ್ತು ಸಾಲ ಸೌಲಭ್ಯಗಳ ಅರ್ಹತಾ ಮಾನದಂಡಗಳ ಮಾಹಿತಿ, ಯೋಜನೆಯ ಪ್ರಯೋಜನೆಗಳು ಹಾಗೂ ಗ್ರಾಮ, ತಾಲ್ಲೂಕು ಜಿಲ್ಲಾ ಮಟ್ಟದ ವಿವಿಧ ಮಾಹಿತಿ ಒಳಗೊಂಡ ಸಂಪರ್ಕ ಸೇತುವೆ ಮತ್ತು ಸಂಪನ್ಮೂಲ ಕೇಂದ್ರವಾಗಿ ಕಾರ್ಯ ನಿರ್ವಹಿಸುತ್ತಿದೆ.
ಮಹಿಳಾ ಸಬಲೀಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ, ನೆರವು ಅಗತ್ಯವಿರುವ ಮಹಿಳೆಯರು ಕಚೇರಿ ವೇಳೆಯಲ್ಲಿ ಜಿಲ್ಲಾ ಮಹಿಳಾ ಶಕ್ತಿ ಕೇಂದ್ರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಉಪ ನಿರ್ದೇಶಕರ ಕಚೇರಿ ಚೈನ್‍ಗೇಟ್ ಹತ್ತಿರ, ದೂರವಾಣಿ ಸಂಖ್ಯೆ 8088063196 ಮತ್ತು ಇ-ಮೇಲ್ ವಿಳಾಸ: mskkodagu2019@gmail.com   ಸಂಪರ್ಕಿಸಬಹುದು ಎಂದು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.