ಮಾಜಿ ನ್ಯಾಯಾಧೀಶ ಹೊಸಬೆಟ್ಟು ಸುರೇಶ್ ನಿಧನ

13/06/2020

ಮುಂಬೈ ಜೂ.13 : “ಮಾನವ ಹಕ್ಕುಗಳಿಗಾಗಿ ಉಗ್ರ ಹೋರಾಟಗಾರ” ಎಂದು ಖ್ಯಾತವಾಗಿದ್ದ ಬಾಂಬೆ ಹೈಕೋರ್ಟ್‍ನ ಮಾಜಿ ನ್ಯಾಯಾಧೀಶ ಹೊಸಬೆಟ್ಟು ಸುರೇಶ್ (90) ನಿಧನರಾಗಿದ್ದಾರೆ.
ಮಾನವ ಹಕ್ಕುಗಳ ಉಲ್ಲಂಘನೆಯ ಬಗ್ಗೆ ತನಿಖೆ ನಡೆಸುವ ಹಲವಾರು ಆಯೋಗಗಳ ನೇತೃತ್ವ ವಹಿಸಿದ್ದ ನ್ಯಾಯಮೂರ್ತಿ ಸುರೇಶ್ 1929 ರ ಜುಲೈ 20ರಂದು ದಕ್ಷಿಣ ಕನ್ನಡದ ಸುರತ್ಕಲ್ ಸಮೀಪದ ಹೊಸಬೆಟ್ಟುವಿನಲ್ಲಿ ಜನಿಸಿದ್ದರು.
ಜೂನ್ 12, 1987 ರಂದು ಬಾಂಬೆ ಹೈಕೋರ್ಟ್‍ನ ಖಾಯಂ ನ್ಯಾಯಾಧೀಶರಾಗಿ ನೇಮಕಗೊಂಡ ನ್ಯಾಯಮೂರ್ತಿ ಸುರೇಶ್ ಅವರು ಜುಲೈ 19, 1991 ರಂದು ನಿವೃತ್ತರಾಗಿದ್ದರು.
ನ್ಯಾಯಮೂರ್ತಿಸುರೇಶ್ ನ್ಯಾಯಮೂರ್ತಿ ತಿವಾಟಿಯಾ ಅವರೊಡನೆ 1991ರ ಡಿಸೆಂಬರ್‍ನಲ್ಲಿ ಬೆಂಗಳೂರಿನಲ್ಲಿ ನಡೆದ ಕಾವೇರಿ ಗಲಭೆಗಳ ತನಿಖೆಗಾಗಿನ ಸಮಿತಿಯಲ್ಲಿ ಕೆಲಸ ಮಾಡಿದ್ದರು.1992 ರ ಡಿಸೆಂಬರ್ ಮತ್ತು 1993 ರ ಜನವರಿಯಲ್ಲಿ ಬಾಂಬೆಯಲ್ಲಿ ನಡೆದ ಬಾಬರಿ ಮಸೀದಿ ಧ್ವಂಸ ಗಲಭೆಗಳ ಬಗ್ಗೆ ತನಿಖೆ ನಡೆಸಲು ನ್ಯಾಯಮೂರ್ತಿ ಸುರೇಶ್ ಮತ್ತು ಸಿರಾಜ್ ಮೆಹ್ಫುಜ್ ದೌದ್ ಅವರನ್ನು ಭಾರತೀಯ ಮಾನವ ಹಕ್ಕುಗಳ ಆಯೋಗ ನೇಮಕ ಮಾಡಿತು. ಅವರು 1993 ರ ದಿ ಪೀಪಲ್ಸ್ ವರ್ಡಿಕ್ಟ್ ಎಂಬ ವರದಿಯಲ್ಲಿ ಪೆÇಲೀಸ್, ಸರ್ಕಾರ ಮತ್ತು ರಾಜಕೀಯ ಮುಖಂಡರನ್ನು ದೋಷಾರೋಪಣೆ ಮಾಡಿದ್ದರು.