ಸೋಮವಾರಪೇಟೆಯಲ್ಲಿ ಕೊರೋನಾ ವೈರಸ್ ಕುರಿತು ಮಾಹಿತಿ ಕಾರ್ಯಕ್ರಮ

15/06/2020

ಸೋಮವಾರಪೇಟೆ ಜೂ. 15 : ಕೋವಿಡ್-19 ವೈರಸ್ ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವ ಬಗ್ಗೆ ಪೋಷಕರಿಗೆ ಮಾಹಿತಿ ಕಾರ್ಯವನ್ನು ವಿಶ್ವಮಾನವ ಕುವೆಂಪು ಶಾಲೆಯಲ್ಲಿ ಏರ್ಪಡಿಸಲಾಗಿತ್ತು. ಶಾಲೆಗಳು ಪ್ರಾರಂಭವಾದಂತೆ ತರಗತಿಗಳಲ್ಲಿ ಮಕ್ಕಳ ಹಿತದೃಷ್ಟಿಯಿಂದ ತೆಗೆದುಕೊಳ್ಳುವ ಮುಂಜಾಗೃತ ಕ್ರಮಗಳ ಬಗ್ಗೆ ಶಾಲೆಯ ಮುಖ್ಯ ಶಿಕ್ಷಕಿ ಮಿಲ್‍ಡ್ರೆಡ್ ಗೊನ್ಸಾಲ್ವೆಸ್ ತಿಳಿಸಿದರು. ಮಕ್ಕಳು ಶುಚಿಯಾದ ಮಾಸ್ಕ್‍ಗಳು ಹಾಗೂ ಸ್ಯಾನಿಟೈಸರ್ ಉಪಯೋಗಿಸುವ ಬಗ್ಗೆ ತಿಳಿಸಿದರು. ಸರಕಾರದ ಸೂಚನೆಯಂತೆ ತರಗತಿಗಳು ಪ್ರಾರಂಭವಾದಂತೆ ವಿದ್ಯಾರ್ಥಿಗಳ ಕಲಿಕಾಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗುತ್ತದೆ. ಪೋಷಕರು ಆತಂಕಪಡುವ ಆಗತ್ಯವಿಲ್ಲ ಎಂದರು.
ಕಾರ್ಯಾಗಾರದಲ್ಲಿ ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್.ಮುತ್ತಣ್ಣ, ಶಾಲೆಯ ಭಾತ್ಮಿದಾರರಾದ ಜಗದೀಶ್, ಅಡಳಿತ ಮಂಡಳಿಯ ಪದಾಧಿಕಾರಿಗಳಾದ ಲಿಂಗರಾಜು, ಬಸಪ್ಪ ಹಾಗೂ ಶಾಲಾ ಶಿಕ್ಷಕಿಯರು ಇದ್ದರು.