ತಾಯಿ, ಇಬ್ಬರು ಮಕ್ಕಳು ನೀರುಪಾಲು

15/06/2020

ಮಂಡ್ಯ ಜೂ.14 : ಕೆರೆಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದ ತಾಯಿ ಹಾಗೂ ಇಬ್ಬರು ಮಕ್ಕಳು ಕಾಲುಜಾರಿ ನೀರಿಗೆ ಬಿದ್ದ ಪರಿಣಾಮ ಮುಳುಗಿ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ನಡೆದಿದೆ.
ನಾಗಮಂಗಲದ ಬೀರನಹಳ್ಳಿ ಗ್ರಾಮದ ಗೀತಾ(40), ಸವಿತಾ(19) ಹಾಗೂ ಸೌಮ್ಯ(14) ಮುಳುಗಿ ಸಾವನ್ನಪ್ಪಿದ ದುರ್ದೈವಿಗಳು.
ಬಟ್ಟೆ ಒಗೆಯಲಿಕ್ಕಾಗಿ ಕೆರೆ ಬಳಿ ಆಗಮಿಸಿದ್ದ ಇವರಲ್ಲಿ ಒಬ್ಬರು ಕಾಲು ಜಾರಿ ನೀರಿಗೆ ಬಿದ್ದಿದ್ದಾರೆ. ಹಾಗೆ ಬಿದ್ದವರನ್ನು ಉಳಿಸಿಕೊಳ್ಳಲು ಹೋಗಿ ಇನ್ನಿಬ್ಬರೂ ಸಹ ನೀರುಪಾಲಾಗಿದ್ದಾರೆ. ಘಟನೆ ನಡೆದಾಗ ಕೆರೆ ಸುತ್ತಮುತ್ತ ಯಾರೂ ಇರಲಿಲ್ಲ ಎನ್ನಲಾಗಿದೆ.
ಕೆರೆಯಲ್ಲಿ ತೇಲುತ್ತಿದ್ದ ಬಿಂದಿಗೆ, ದಡದಲ್ಲಿದ್ದ ಬಟ್ಟೆಗಳ ನೋಡಿ ಕೆರೆಯಲ್ಲಿ ಯಾರೋ ಬಿದ್ದಿದ್ದಾರೆ ಎನ್ನುವುದು ಗಮನಿಸಿದ ಗ್ರಾಮಸ್ಥರು ಪರೀಕ್ಷಿಸಿದಾಗ ಮೂವರ ಮೃತದೇಹಗಳು ಪತ್ತೆಯಾಗಿದೆ.
ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ವರದಿಯಾಗಿದೆ.