ನೆನೆಸಿಟ್ಟ ಖರ್ಜೂರ ಸೇವನೆಯಿಂದ ಆರೋಗ್ಯ ಲಾಭಗಳು

15/06/2020

ಖರ್ಜೂರ ಸೇವನೆಯಿಂದ ದೇಹದ ಆರೋಗ್ಯಕ್ಕೆ ಅಸಂಖ್ಯಾತ ಪ್ರಯೋಜನಗಳಿವೆ. ವಾಸ್ತವವಾಗಿ ಇದೊಂದು ರುಚಿಯಲ್ಲಿ ಅತ್ಯಂತ ಸಿಹಿಯಾಗಿರುವ ಹಾಗೂ ಖನಿಜಾಂಶಗಳು ಹಾಗೂ ವಿಟಾಮಿನ್‍ಗಳು ಸಮೃದ್ಧವಾಗಿರುವ ಒಣ ಹಣ್ಣಾಗಿದೆ. ಖರ್ಜೂರದ ಕೃಷಿಗೆ ನೂರಾರು ವರ್ಷಗಳ ಇತಿಹಾಸವಿದೆ. ಪೆÇ್ರೀಟೀನ್ ಹಾಗೂ ನಾರಿನ (ಫೈಬರ್)ಅಂಶಗಳೂ ಖರ್ಜೂರದಲ್ಲಿ ಹೇರಳವಾಗಿವೆ. ವಿಟಮಿನ್1 ಹಾಗೂ ಸಿ ಜೊತೆಗೆ ಬಿ1,ಬಿ2,ಬಿ3 ಹಾಗೂ ಬಿ5 ವಿಟಮಿನ್‍ಗಳೂ ಆ ಹಣ್ಣಿನಲ್ಲಿ ಅಧಿಕವಾಗಿವೆ. ಖರ್ಜೂರವು ಕರಗುವ ಹಾಗೂ ಕರಗಲಾರದ ಫೈಬರ್ ಅಂಶಗಳು ಹಾಗೂ ವಿವಿಧ ರೀತಿಯ ಆಮಿನೊ ಯಾಸಿಡ್‍ಗಳನ್ನು ಹೊಂದಿರುವುದರಿಂದ ಅದು ಜೀರ್ಣಕ್ರಿಯೆ ವ್ಯವಸ್ಥೆಯನ್ನು ಉತ್ತಮಗೊಳಿಸುತ್ತದೆ.

ಖರ್ಜೂರಗಳು ಗ್ಲೂಕೋಸ್, ಸುಕ್ರೋಸ್ ಹಾಗೂ ಫ್ರಕ್ಟೋಸ್‍ಗಳಂತಹ ನೈಸರ್ಗಿಕ ಶರ್ಕರ ಅಂಶಗಳನ್ನು ಹೊಂದಿರುವುದರಿಂದ ಅವು ದೇಹದ ಶಕ್ತಿಯನ್ನು ಉತ್ತೇಜಿಸುತ್ತವೆ. ಖರ್ಜೂರವನ್ನು ಹಾಲಿನೊಂದಿಗೆ ಬೆರೆಸಿ ಸೇವಿಸಿದಲ್ಲಿ ಅದರಿಂದ ಆರೋಗ್ಯಕ್ಕೆ ಇನ್ನೂ ಹೆಚ್ಚಿನ ಪ್ರಯೋಜನವಾಗಲಿದೆ. ಖರ್ಜೂರದಲ್ಲಿ ಪೆÇೀಟ್ಯಾಶಿಯಂ ಹೇರಳವಾಗಿದ್ದು, ಸೋಡಿಯಂ ಕಡಿಮೆ ಪ್ರಮಾಣದಲ್ಲಿರುವುದರಿಂದ ನರಮಂಡಲವನ್ನು ಆರೋಗ್ಯಕರವಾಗಿಡಲು ಅದು ನೆರವಾಗುತ್ತದೆ ಪೆÇೀಟ್ಯಾಶಿಯಂ ಅಂಶವನ್ನು ನಿರ್ದಿಷ್ಟ ಪ್ರಮಾಣದವರೆಗೆ ಸೇವಿಸಿದಲ್ಲಿ ಪಾಶ್ರ್ವವಾಯುವಿನ ಅಪಾಯವನ್ನು ಕಡಿಮೆಗೊಳಿಸಬಹುದೆಂಬುದನ್ನು ಇತ್ತೀಚಿನ ಸಂಶೋಧನೆಗಳು ಬಹಿರಂಗಪಡಿಸಿವೆ. ಖರ್ಜೂರದಲ್ಲಿ ಅತ್ಯಧಿಕ ಪ್ರಮಾಣದ ಕಬ್ಬಣದ ಅಂಶವಿದ್ದು, ರಕ್ತಹೀನತೆಗೆ ಚಿಕಿತ್ಸೆ ನೀಡಲು ಅದು ಅತ್ಯಂತ ಪ್ರಯೋಜನಕಾರಿಯಾಗಿದೆ. ಖರ್ಜೂರವನ್ನು ಅಧಿಕ ಪ್ರಮಾಣದಲ್ಲಿ ಸೇವಿಸಿದಲ್ಲಿ ಮಾತ್ರ ಆರೋಗ್ಯಕ್ಕೆ ಹೆಚ್ಚಿನ ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಖರ್ಜೂರದಲ್ಲಿ ಪೆÇ್ರೀಟೀನ್ ಅಂಶವೂ ಇರುವುದರಿಂದ ದಂತಕ್ಷಯವನ್ನು ಅದು ತಡೆಯುತ್ತದೆ.

ಮಲಬದ್ಧತೆಯಿಂದ ನರಳುವವರಿಗೂ ಅದು ಪ್ರಯೋಜನಕರವಾಗಿದೆ. ರಾತ್ರಿ ಖರ್ಜೂರವನ್ನು ನೀರಿನಲ್ಲಿ ನೆನೆಸಿಟ್ಟು, ಅದೇ ನೀರಿನೊಂದಿಗೆ ಅದನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಇನ್ನೂ ಹೆಚ್ಚು ಪ್ರಯೋಜನವಿದೆ. ಖರ್ಜೂರವು ಲೈಂಗಿಕ ಸಾಮಥ್ರ್ಯವನ್ನೂ ಹೆಚ್ಚಿಸಲು ನೆರವಾಗುತ್ತದೆ. ಖರ್ಜೂರಗಳಿಂದ ಆರೋಗ್ಯಕ್ಕೆ ಬಹಳಷ್ಟು ಪ್ರಯೋಜನ ಗಳಿರುವುದರಿಂದ, ಖರ್ಜೂರವನ್ನು ಖರೀದಿಸುವಾಗ ಅವುಗಳ ಗುಣಮಟ್ಟದ ಬಗ್ಗೆ ಜಾಗ್ರತೆ ವಹಿಸಬೇಕಾಗುತ್ತದೆ. ಸಮರ್ಪಕವಾಗಿ ಪ್ಯಾಕ್ ಮಾಡಿದ ಹಾಗೂ ಸಂಸ್ಕರಿಸಿದ ಖರ್ಜೂರ ಸೇವನೆ ಉತ್ತಮ. ಖರ್ಜೂರ ಖರೀದಿಸುವಾಗ ಬೆಲೆ ತುಸು ಹೆಚ್ಚಾದರೂ ಸಹ ಪರವಾಗಿಲ್ಲ ಉತ್ತಮ ಗುಣಮಟ್ಟದನ್ನು ಆಯ್ಕೆ ಮಾಡುವುದು ಒಳಿತು.