ಇಂಡೋ-ಇಸ್ಲಾಮಿಕ್‌ ಶೈಲಿಯ ಕೊಡಗಿನ ರಾಜರ ಗದ್ದಿಗೆ

15/06/2020

ರಾಜರ ಗದ್ದಿಗೆಯು ಕೊಡಗಿನಲ್ಲಿರುವ ಅತ್ಯಂತ ಜನಪ್ರಿಯವಾದ ಪ್ರವಾಸಿ ತಾಣ. ರಾಜರ ಗದ್ದಿಗೆಯು ಕೊಡಗು ರಾಜರಗಳಾದ ದೊಡ್ಡವೀರರಾಜೇಂದ್ರ, ಲಿಂಗರಾಜೇಂದ್ರ ಮತ್ತು ರಾಜಗುರು ರುದ್ರಪ್ಪ ಅವರ ಭವ್ಯಸಮಾಧಿಯಾಗಿದೆ. ಗದ್ದಿಗೆಯು ಎರಡು ವಿಶಿಷ್ಟವಾದ ರಚನೆಯನ್ನು ಹೊಂದಿದ್ದು, ರಾಜ ದೊಡ್ಡವೀರರಾಜೇಂದ್ರರ ರಾಣಿಯ ಸಮಾಧಿಯನ್ನು ಹೊಂದಿದೆ. ಇವೆರಡೂ ಒಂದಕ್ಕೊಂದು ಸಮೀಪವಿದ್ದು, ಇಂಡೋ-ಇಸ್ಲಾಮಿಕ್‌ ಶೈಲಿಯಲ್ಲಿ ರಚನೆ ಮಾಡಲಾಗಿದೆ. ಸುತ್ತ ನಾಲ್ಕು ಕಂಬಗಳಿಂದ ಮಧ್ಯದ ಗೋಪುರವನ್ನು ಬೆಂಬಲಿಸಲಾಗಿದೆ. ಬಲಗಡೆಯ ಸಮಾಧಿಯು ರಾಜ ಲಿಂಗರಾಜೇಂದ್ರರದ್ದಾಗಿದ್ದು ಇದನ್ನು ಇವರ ಮಗನಾದ ರಾಜ ಚಿಕ್ಕವೀರರಾಜೇಂದ್ರರಿಂದ 1820ರಲ್ಲಿ ನಿರ್ಮಾಣ ಮಾಡಲ್ಪಟ್ಟಿತು. ಎಡಗಡೆಯ ಸಮಾಧಿಯು ರಾಜ ಅರ್ಚಕ ರುದ್ರಪ್ಪನವರದ್ದಾಗಿದ್ದು ಇದನ್ನು 1834ರಲ್ಲಿ ನಿರ್ಮಿಸಲಾಗಿದೆ. ಸಮೀದಲ್ಲಿ ಎರಡು ಅರಮನೆಯ ಅಧಿಕಾರಿಗಳನ್ನು ಸಮಾಧಿ ಮಾಡಲಾಗಿದ್ದು, ಟಿಪ್ಪು ಸುಲ್ತಾನನ ಜೊತೆಗೆ ಯುದ್ಧ ಮಾಡಿ ಮೃತಪಟ್ಟಿರುವ ಬಿದ್ದಂಡ ಬೋಪು ಮತ್ತು ಅವನ ಮಗ ಬಿದ್ದಂಡ ಸೋಮಯ್ಯ ಸಮಾಧಿ ಇದಾಗಿದೆ. ಈ ಪ್ರದೇಶವು ಮಡಿಕೇರಿಯಿಂದ ಕೇವಲ ಒಂದು ಕಿ.ಮೀ ದೂರದಲ್ಲಿದೆ.

ವಿಮಾನದಲ್ಲಿ

ಕೊಡಗು ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ಇರುವುದಿಲ್ಲ.ಕೊಡಗುಯಿಂದ 137 ಕಿ.ಮೀ ದೂರದಲ್ಲಿರುವ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಹತ್ತಿರದ ವಿಮಾನ ನಿಲ್ದಾಣವಾಗಿದೆ. ಮೈಸೂರು ದೇಶೀಯ ವಿಮಾನ ನಿಲ್ದಾಣವು ಮಡಿಕೇರಿನಿಂದ ಸುಮಾರು 121 ಕಿ.ಮೀ ದೂರದಲ್ಲಿದೆ. ಕನ್ನೂರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಡಿಕೇರಿನಿಂದ 120 ಕಿ.ಮೀ ದೂರದಲ್ಲಿದೆ.

ರೈಲಿನಿಂದ

ಕೊಡಗು ಜಿಲ್ಲೆಯಲ್ಲಿ ರೈಲ್ವೆ ನಿಲ್ದಾಣ ಇರುವುದಿಲ್ಲ. ಮಡಿಕೇರಿ ಹತ್ತಿರದ ರೈಲು ನಿಲ್ದಾಣವೆಂದರೆ (ಜಿಲ್ಲೆಯ ಪ್ರಧಾನ ಕಛೇರಿ, ಮಡಿಕೇರಿ), ಮೈಸೂರು ಹಾಸನ ಮತ್ತು ಕರ್ನಾಟಕ ರಾಜ್ಯದ ಮಂಗಳೂರು ಮತ್ತು ಕೇರಳ ರಾಜ್ಯದ ತಲಸ್ಸೆರಿ ಮತ್ತು ಕಣ್ಣೂರು.

ರಸ್ತೆ ಮೂಲಕ

ಮಡಿಕೇರಿ ಬಸ್ ನಿಲ್ದಾಣದಿಂದ 2 ಕಿಮೀ