ಮಾರಾಟ ಮಾಡ್ತಾ ಇದ್ದದ್ದು ಟೊಮೆಟೋ, ಸಿಕ್ಕಿದ್ದು ಗೋಮಾಂಸ : ಟಿ.ಶೆಟ್ಟಿಗೇರಿಯಲ್ಲಿ ಪ್ರಕರಣ

15/06/2020

ಮಡಿಕೇರಿ ಜೂ.15 : ಟಿ.ಶೆಟ್ಟಿಗೇರಿಯ ವಾರದ ಸಂತೆಯ ದಿನವಾದ ಇಂದು ಟೊಮೆಟೋ ಮಾರಾಟ ಮಾಡುತ್ತಿದ್ದ ವಾಹನದಲ್ಲಿ ಗೋಮಾಂಸ ಪತ್ತೆಯಾಗಿದೆ. ಖಚಿತ ಮಾಹಿತಿ ದೊರೆತ ಹಿನ್ನೆಲೆ ಸಂಘ ಪರಿವಾರ ಹಾಗೂ ಬಿಜೆಪಿ ಪ್ರಮುಖರು ಸಂಶಯಗೊಂಡು ಟೊಮೆಟೋವಿದ್ದ ಟಾಟಾ ಏಸ್ ವಾಹನದಲ್ಲಿ ಪರಿಶೀಲನೆ ನಡೆಸಿದಾಗ ಕೆ.ಆರ್.ನಗರದಿಂದ ತರಲಾಗಿದ್ದ ಗೋಮಾಂಸ ಪತ್ತೆಯಾಗಿದೆ. ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೊಡಗಿನಲ್ಲಿ ಗೋಮಾಂಸ ಮಾರಾಟಕ್ಕೆ ನಿರ್ಬಂಧವಿದ್ದರೂ ಅಕ್ರಮವಾಗಿ ಗೋಮಾಂಸ ಸಾಗಾಟವಾಗುತ್ತಿರುವ ಬಗ್ಗೆ ಟಿ.ಶೆಟ್ಟಿಗೇರಿ ಬಿಜೆಪಿ ಪ್ರಮುಖರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.