ಆಲೂರು ಸಿದ್ದಾಪುರ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಅಗ್ನಿ ಆಕಸ್ಮಿಕ

15/06/2020

ಮಡಿಕೇರಿ ಜೂ.15 : ಯುಪಿಎಸ್ ಉಪಕರಣದಲ್ಲಿ ಶಾರ್ಟ್ ಸಕ್ರ್ಯೂಟ್ ಉಂಟಾಗಿ ಬ್ಯಾಂಕ್ ಸೇರಿದಂತೆ ಬ್ಯಾಂಕ್ ವ್ಯವಹಾರಕ್ಕೆ ಸಂಬಂಧಪಟ್ಟ ಕಂಪ್ಯೂಟರ್, ಗ್ರಾಹಕರ ವ್ಯವಹಾರದ ದಾಖಲಾತಿ, ಕಡತಗಳು, ಪೀಠೋಪಕರಣಗಳು ಬೆಂಕಿಗೆ ಆಹುತಿಯಾದ ಘಟನೆ ಸೋಮವಾರ ಬೆಳಗ್ಗಿನ ಜಾವ ಆಲೂರು ಸಿದ್ದಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನಡೆದಿದೆ.
ಅಗ್ನಿ ಶಾಮಕ ದಳ ಬರುವ ಹೊತ್ತಿಗಾಗಲೇ ಪ್ರಮುಖ ದಾಖಲೆಗಳು ಅಗ್ನಿಗಾಹುತಿಯಾಗಿದ್ದವು. ಸಹಕಾರ ಸಂಘದ ಆಡಳಿತ ಮಂಡಳಿ ಘಟನೆಗೆ ವಿಷಾದ ವ್ಯಕ್ತಪಡಿಸಿದೆ.