ಸುಂಟಿಕೊಪ್ಪದ ವಿವಿಧೆಡೆ ಕ್ರಿಮಿನಾಶಕ ಔಷಧ ಸಿಂಪಡಣೆ
16/06/2020

ಸುಂಟಿಕೊಪ್ಪ,ಜೂ.16 : ಸುಂಟಿಕೊಪ್ಪದ ವಿವಿಧ ಬಡಾವಣೆಗಳಲ್ಲಿ ಸಾಂಕ್ರಾಮಿಕ ರೋಗಗಳ ನಿಯಂತ್ರಿಸುವ ದಿಸೆಯಲ್ಲಿ ಕ್ರಿಮಿನಾಶಕಗಳನ್ನು ಗ್ರಾಮ ಪಂಚಾಯಿತಿ ವತಿಯಿಂದ ಸಿಂಪಡಿಸಲಾಯಿತು.
ಗ್ರಾಮ ಪಂಚಾಯಿತಿ ವ್ಯಾಪ್ತಿಯ ಡೆಂಘಿಜ್ವರ, ಚಿಕುನ್‍ಗುನ್ಯಾ, ಮಲೇರಿಯಾ, ಕ್ಷಯರೋಗ ಇನ್ನಿತರ ಸಾಕ್ರಾಂಮಿಕ ರೋಗಗಳನ್ನು ನಿಯಂತ್ರಿಸುವ ದಿಸೆಯಲ್ಲಿ 7 ಬಡಾವಣೆಗಳಲ್ಲಿ ಕ್ರಿಮಿನಾಶಕ ಜೌಷಧಿಯನ್ನು ಪಂಚಾಯಿತಿ ಪೌರಕಾರ್ಮಿಕರು ಸಿಂಪಡಿಸಿದರು. ಪೊಲೀಸ್ ಠಾಣಾ ಆವರಣದಲ್ಲಿ ಬೆಳೆದು ನಿಂತ ಗಿಡಗುಂಟೆಗಳನ್ನು ಕಡಿದು ಸ್ವಚ್ಚತಾ ಕಾರ್ಯವನ್ನು ಪೌರಕಾರ್ಮಿಕರು ನಡೆಸಿದರು.

