ಪೆಟ್ರೋಲ್, ಡೀಸೆಲ್ ಬೆಲೆ ಮತ್ತೆ ಏರಿಕೆ

16/06/2020

ನವದೆಹಲಿ ಜೂ.16 : ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಸತತ 9ನೇ ದಿನವೂ ಏರಿಕೆ ಕಂಡಿದ್ದು, ಗ್ರಾಹಕರಿಗೆ ಆಘಾತವನ್ನು ನೀಡಿದೆ.
9 ದಿನಗಳ ಅವಧಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ ರೂ.5 ಏರಿಕೆಯಾಗಿದ್ದರೆ, ಡೀಸೆಲೆ ಬೆಲೆ ಪ್ರತೀ ಲೀಟರ್’ಗೆ ರೂ.4.87 ರಷ್ಟು ಏರಿಕೆಯಾಗಿದೆ.
9ನೇ ದಿನವಾದ ಸೋಮವಾರ ಕೂಡ ಪೆಟ್ರೋಲ್ ಬೆಲೆ ಲೀಟರ್’ಗೆ 48 ಪೈಸೆ ಹಾಗೂ ಡೀಸೆಲ್ ಬೆಲೆ ಲೀಟರ್’ಗೆ 23 ಪೈಸೆ ಏರಿಕೆ ಕಂಡಿದೆ.
ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಪ್ರತೀ ಲೀಟರ್ ಪೆಟ್ರೋಲ್ ದರ ಇದೀಗ ರೂ.76.26ಕ್ಕೆ ಏರಿಕೆಯಾಗಿದೆ. ಇನ್ನು ಡೀಸೆಲ್ ದರ ರೂ.74.26ಕ್ಕೆ ತಲುಪಿದೆ. ಬೆಂಗಳೂರಿನಲ್ಲಿ ಪ್ರತೀ ಲೀಟರ್ ಪೆಟ್ರೋಲ್ ದರ ಇದೀಗ ರೂ.78.73 ಆಗಿದ್ದು, ಡೀಸೆಲ್ ದರ ರೂ.70.95ಕ್ಕೆ ಏರಿಕೆಯಾಗಿದೆ.