‘ಮಧುವಿನಬೀಡು’ ಎಂದೇ ಪ್ರಖ್ಯಾತಿ ಪಡೆದಿದ್ದ ಮದೆನಾಡು

16/06/2020

ಅತಿ ಹೆಚ್ಚು ಜೇನುಕೃಷಿ ಮಾಡುತ್ತಿದ್ದ ಪರಿಣಾಮ ‘ಮಧುವಿನಬೀಡು’ ಎಂದೇ ಪ್ರಖ್ಯಾತಿ ಪಡೆದಿದ್ದ ಗ್ರಾಮವೇ ಇಂದಿನ ‘ಮದೆನಾಡು’ ಗ್ರಾಮವಾಗಿದೆ. ಮಡಿಕೇರಿ ತಾಲೂಕಿನ ಮದೆನಾಡು ಗ್ರಾಮದಲ್ಲಿ ಅಂದಿನ ಕಾಲದಲ್ಲಿ ಹೆಚ್ಚಾಗಿ ಜೇನು ಕೃಷಿ ಮಾಡಲಾಗುತ್ತಿತ್ತು. ಆದ್ದರಿಂದ ಮದುವಿನ ಬೀಡು ಎಂದು ಹೆಸರು ಗಳಿಸಿತ್ತು. ನಂತರ ಅದು ಮದೆನಾಡು ಗ್ರಾಮವಾಗಿ ಹೆಸರು ಪಡೆದಿದೆ ಎಂದು ಕೆಲವರು ಹೇಳಿದರೆ, ಇನ್ನೂ ಕೆಲವರು ಗ್ರಾಮದಲ್ಲಿರುವ ‘ಮಹೇಶ್ವರ’ ಹೆಸರಿನಿಂದ ‘ಮ’ ಮತ್ತು ದೇವರು ಪದದಿಂದ ‘ದೇ’ ಎಂಬ ಎರಡು ಅಕ್ಷರಗಳು ಸೇರಿ ‘ಮದೆ’ ಎಂದು ಕರೆಯಲಾಗುತ್ತದೆ.

ಕುಡಿಯ ಹಾರಿದ ಕಲ್ಲು :
ಕುಡಿಯ ಜನಾಂಗದ ‘ಪಾಚಾ’ ಎಂಬಾತ ಬೆಳಗ್ಗೆ ಹೊತ್ತಲ್ಲಿ ಗಡಿಗೆಯಲ್ಲಿ ಸೇಂದಿಯನ್ನು ಕುಡಿತ ಕುದುರೆ ದಾರಿಯಲ್ಲಿ ಕುಳಿತ್ತಿದ್ದ. ಈ ಸಂದರ್ಭದಲ್ಲಿ ಕುದುರೆ ಸವಾರ ಬುರುತ್ತಾನೆ. ಇಷ್ಟು ಬೆಳಗ್ಗೆ ಹೋಗ್ತ ಇದ್ದೀಯಲ್ಲ ಏನಪ್ಪ ಸಮಾಚಾರ ಎಂದು ಪಾಚಾ ಕುದುರೆ ಸವಾರನನ್ನು ಪ್ರಶ್ನೆ ಮಾಡುತ್ತಾನೆ. ಅದಕ್ಕೆ ಉತ್ತರಿಸಿದ ಕುದುರೆ ಸವಾರ, ನಮ್ಮ ರಾಜನಿಗೆ ಗಂಡುಮಗು ಆಗಿದೆ.(ಆರಂಭದಲ್ಲಿ ಮಡಿಕೇರಿ ಅರಸನಿಗೆ ಗಂಡು ಸಂತಾನ ಇರಲಿಲ್ಲ) ಅದನ್ನು ಹೇಳಲು ಸಂಪಾಜೆ ಕಡೆಗೆ ಹೋಗುತ್ತಿದ್ದೇನೆ ಎಂದು ಹೇಳುತ್ತಾನೆ. ಖುಷಿಪಟ್ಟ ಪಾಚಾ ಕುಳಿತ ಸ್ಥಳದಿಂದ ದೂರಕ್ಕಿ ಜಿಗಿಯುತ್ತಾನೆ. ಜಿಗಿದ ರಭಸಕ್ಕೆ ಸ್ಥಳದಲ್ಲೇ ಪ್ರಸಕ್ತ ಸಾಲಿನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪಕ್ಕೆ ಆ ಇತಿಹಾಸದ ಕಲ್ಲು ಇದೆಯಾ ಎಂಬುದು ತಿಳಿದಿಲ್ಲ.

ಉತ್ಸವಗಳು : ಪ್ರತಿವರ್ಷ ಮಾ. 9, 10 ಹಾಗೂ 11 ರಂದು ಮದೆಮಾದುರಪ್ಪ ಉತ್ಸವ ನಡೆಯುತ್ತದೆ. ಅಂದು ದೇವಾಲಯದ ವಿಶೇಷ ಪೂಜೆಗಳು ಮೂರು ಹಂತದಲ್ಲಿ ನಡೆಯುತ್ತದೆ. ಇದು ಈ ದೇವಾಲಯದ ವಿಶೇಷ. ಉತ್ಸವಕ್ಕೆ ಸಾವಿರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ಹಾಗೂ ಹೊರ ಜಿಲ್ಲೆಗಳಿಂದ ಆಗಮಿಸುತ್ತಾರೆ. ದೇವಸ್ಥಾನ ಮುಖ್ಯ ರಸ್ತೆಯಿಂದ ಸುಮಾರು 2. ಕಿ. ಮೀ. ದೂರದ ಒಳರಸ್ತೆಯಲ್ಲಿ ಕ್ರಮಿಸಿದರೆ ಮದೆಮಾದುರಪ್ಪನ ದರ್ಶನವಾಗುತ್ತದೆ.

ಹತ್ತಿರದ ಪ್ರವಾಸಿ ತಾಣಗಳು : ಮೈಸೂರು – ಬಂಟ್ವಾಳ ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಮದೆನಾಡು ಮೂಲಕ ಸಾಗುವಾಗ ಜೋಡುಪಾಲ ಜಲಪಾತ ಬೆಳ್ನೂರೆ ಸೂಸುತ್ತಾ ಹರಿಯುತ್ತಿರುವುದು ಕಾಣಸಿಗುತ್ತದೆ. ಸುತ್ತಮುತ್ತಲು ನಿಶಾನಿಬೆಟ್ಟ, ಕರಡಿ ಬೆಟ್ಟ, ಸೇರಿದಂತೆ ಇತರ ಬೆಟ್ಟಗುಡ್ಡಗಳು ಪ್ರವಾಸಿಗರ ಮನ ಸೆಳೆಯುತ್ತದೆ.

ಮಾರ್ಗ : ಮಡಿಕೇರಿಯಿಂದ ಮೈಸೂರು – ಬಂಟ್ವಾಳ ರಾಷ್ಟ್ರೀಯ ಹೆದ್ದಾರಿ – 275 ಮೂಲಕ 9 ಕಿ.ಮೀ ಸುಳ್ಯದಿಂದ ಸುಮಾರು 41 ಕಿ.ಮೀ. ಸಾಗಿದಲ್ಲಿ ಮದೆನಾಡು ಗ್ರಾಮ ಸಿಗುತ್ತದೆ.