ಮರಗೋಡಿನಲ್ಲಿ ಹೆಬ್ಬಾವು ಸೆರೆ

16/06/2020

ಮರಗೋಡು, ಜೂ16 : ಇಲ್ಲಿನ ಹೆಗ್ಗೇರಿ ಎಸ್ಟೇಟ್ ನಲ್ಲಿ ಸುಮಾರು 12 ಅಡಿ ಉದ್ದದ ಹೆಬ್ಬಾವು ಪತ್ತೆಯಾಗಿದೆ. ಮಾಲೀಕರು ತಕ್ಷಣವೇ ಉರಗ ತಜ್ಞ ಮೂರ್ನಾಡುವಿನ ಸ್ನೇಕ್ ಪ್ರಜ್ವಲ್ ಅವರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪ್ರಜ್ವಲ್ ಹಾವನ್ನು ಸೆರೆ ಹಿಡಿದು ಅರಣ್ಯಾಧಿಕಾರಿ ದೇವಯ್ಯ ಮತ್ತು ತಂಡಕ್ಕೆ ಹಸ್ತಾಂತರಿಸಿದರು. ಹೆಬ್ಬಾವು ಸುಮಾರು 20ಕೆಜಿ ತೂಗುತ್ತಿತ್ತು. ಹಾವು ಕಾಡುಕುರಿ ಮರಿಯೊಂದನ್ನು ಭಕ್ಷಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.