ನಲ್ವತ್ಕೇರೆ ಗ್ರಾಮದ ರಸ್ತೆಯಲ್ಲಿ ಬಾಳೆಗಿಡ ನೆಟ್ಟು ಗ್ರಾಮಸ್ಥರಿಂದ ಪ್ರತಿಭಟನೆ

16/06/2020

ಸಿದ್ದಾಪುರ ಜೂ. 16 : ಕಳೆದ ಹಲವು ವರ್ಷಗಳಿಂದಲೂ ಅಭಿವೃದ್ಧಿಕಾಣದರಸ್ತೆಯಲ್ಲಿ ಬಾಳೆಗಿಡ ನೆಟ್ಟು. ಅಧಿಕಾರಿಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದರು.
ಸೋಮವಾರಪೇಟೆ ತಾಲ್ಲೂಕಿನ ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಲ್ವತ್ಕೇರೆ ಗ್ರಾಮಕ್ಕೆ ತೆರಳುವ ಗುಂಡಿ ಬಿದ್ದರಸ್ತೆಯಲ್ಲಿ ಬಾಳೆಗಿಡ ನೆಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ .
ಗ್ರಾಮ ವ್ಯಾಪ್ತಿಯಲ್ಲಿ ಬಹುತೇಕಕಾರ್ಮಿಕ ಕುಟುಂಬಗಳೇ ಅಧಿಕವಾಗಿದ್ದು ಕಳೆದ ಹಲವು ವರ್ಷಗಳಿಂದಲೂ ರಸ್ತೆ ದುರಸ್ತಿ ಕಾಣದೆದೊಡ್ಡ ಗುಂಡಿಗಳಾಗಿ ಪರಿವರ್ತನೆಯಾಗಿದ್ದು ದಿನನಿತ್ಯ ಸಂಚರಿಸುವ ಶಾಲಾ ಮಕ್ಕಳು, ಕಾರ್ಮಿಕರು ಹಾಗೂ ಸಾರ್ವಜನಿಕರು ಸಂಕಷ್ಟಎದುರಿಸುವಂತಾಗಿದೆ. ಗ್ರಾಮದ ನಿವಾಸಿ ಪ್ರಕಾಶ ಮಾತನಾಡಿಅತ್ತಿಮಂಗಲ ಮುಖ್ಯರಸ್ತೆಯಿಂದ ನಲ್ವತ್ತೇಕರೆಗ್ರಾಮಕ್ಕೆಒಂದೂವರೆಕಿಲೋಮೀಟರ್‍ಅಂತರವಿದ್ದು ಕಳೆದ ಹಲವು ವರ್ಷಗಳಿಂದಲೂ ರಸ್ತೆಅಭಿವೃದ್ಧಿ ಮಾಡದೆ ಕಡೆಗಣಿಸಿರುವುದರಿಂದ ಇದೀಗ ರಸ್ತೆಯುದ್ದಕ್ಕೂ ಭಾರಿಗಾತ್ರದ ಗುಂಡಿಗಳಾಗಿ ಪರಿವರ್ತನೆಯಾಗಿದೆ.
ರಸ್ತೆಅಭಿವೃದ್ಧಿಗಾಗಿ ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಮಾಡಲಾಗಿದ್ದರೂಗಂಭೀರವಾಗಿ ಪರಿಗಣಿಸಿಲ್ಲ. ರಸ್ತೆಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಇಡಲಾಗಿದೆಎಂದು ಸುಳ್ಳು ಹೇಳುವ ಅಧಿಕಾರಿ. ಜನಪ್ರತಿನಿಧಿಗಳು ಇದುವರೆಗೂಅಭಿವೃದ್ಧಿ ಮಾಡದೆ ಕಡೆಗಣಿಸಿದ್ದಾರೆ. ಕ್ಷೇತ್ರದ ಶಾಸಕರು ಹಾಗೂ ಎಂ ಪಿಗೆ ಮನವಿ ಮಾಡಲಾಗಿದ್ದರೂ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಆರೋಪಿಸಿದ ಅವರು ಕೂಡಲೇರಸ್ತೆ ಸರಿಪಡಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ರಸ್ತೆತಡೆ ಮಾಡುವ ಮೂಲಕ ಬೃಹತ್ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಗ್ರಾಮದ ನಿವಾಸಿ ರಘುಕಾರ್ಯಪ್ಪ ಮಾತನಾಡಿ ಕಳೆದ ಐವತ್ತು ವರ್ಷಗಳಿಂದಲೂ ಸಾರ್ವಜನಿಕ ಮುಖ್ಯರಸ್ತೆಯಾಗಿದ್ದು ದಿನನಿತ್ಯ ನೂರಾರು ಮಂದಿ ನಡೆದು ಸಾಗುತ್ತಿದ್ದಾರೆ.ರಸ್ತೆಯುದ್ದಕ್ಕೂಡಾಂಬರೀಕರಣವೂಇಲ್ಲದೆ ಭಾರಿಗಾತ್ರದ ಗುಂಡಿಗಳಾಗಿ ಪರಿವರ್ತನೆಯಾಗಿದೆ.ಮಳೆಗಾಲ ಸಂದರ್ಭದಲ್ಲಿರಸ್ತೆಯಲ್ಲಿ ನೀರು ನಿಂತು ವಾಹನ ಹಾಗೂ ಸಾರ್ವಜನಿಕ ಸಂಚಾರಕ್ಕೆತೊಡಕುಂಟಾಗಿದೆ. ಚುನಾವಣೆ ಸಂದರ್ಭದಲ್ಲಿ ಭೇಟಿ ನೀಡಿ ಮತ ಪಡೆದಜನಪ್ರತಿನಿಧಿಗಳು ಗ್ರಾಮವನ್ನುಕಡೆಗಣಿಸುತ್ತಿದ್ದಾರೆ. ರಸ್ತೆಗಾಗಿ ಹಲವು ವರ್ಷಗಳಿಂದಲೂ ಹೋರಾಟ ಮಾಡಿದ್ದರುಇದವರೆಗೂರಸ್ತೆ ಸರಿಪಡಿಸಲು ಮುಂದಾಗಿಲ್ಲಎಂದುಅಧಿಕಾರಿ ಹಾಗೂ ಜನಪ್ರತಿನಿಧಿಗಳ ವಿರುದ್ಧಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮದ ನಿವಾಸಿ ಅರುಣ್ ಮಾತನಾಡಿಗ್ರಾಮಕ್ಕೆಇದುವರೆಗೂ ಸರ್ಕಾರಿ ಬಸ್ ಸೇವೆ ಇಲ್ಲದೇ ಖಾಸಗಿ ವಾಹನಗಳಲ್ಲಿ ಶಾಲಾ ಮಕ್ಕಳು ಸಾರ್ವಜನಿಕರು ಸಂಚರಿಸುತ್ತಿದ್ದಾರೆ. ತುರ್ತು ಸಂದರ್ಭದಲ್ಲಿಆಸ್ಪತ್ರೆಗೆ ತೆರಳಲು ವಾಹನಗಳನ್ನು ಕರೆದರೆ ಈ ರಸ್ತೆಯಲ್ಲಿ ಬರೋದಿಲ್ಲ ಅಂತ ಹೇಳುತ್ತಾರೆ. ಇನ್ನು ಕೆಲವು ಕಾರ್ಮಿಕರು ಹಾಗೂ ಸಾರ್ವಜನಿಕರುದುಬಾರಿ ಬಾಡಿಗೆ ನೀಡಿಗ್ರಾಮಕ್ಕೆತಲುಪಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಡಾನೆಗಳ ಕಾಟವೂಅಧಿಕವಾಗಿರುವಇನ್ನಲ್ಲೇಯಲ್ಲಿ ಸಾರ್ವಜನಿಕರು ಭಯಪಡುವಂತಾಗಿದೆ.
ಶಾಲೆಗೆ ತೆರಳುವ ವಿದ್ಯಾರ್ಥಿಗಳು ಗುಂಡಿ ಬಿದ್ದರಸ್ತೆಯಲ್ಲಿ ನಡೆದು ಸಾಗಲು ಸಾಧ್ಯವಾಗದೆ ಶಾಲಾ ಕಾಲೇಜಿಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಗ್ರಾಮ ಪಂಚಾಯಿತಿಯಿಂದಅನುಮತಿ ಪಡೆದ ಮರಳು ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತಿದ್ದು
ಸಂಬಂಧಪಟ್ಟಅಧಿಕಾರಿ ಹಾಗೂ ಜನಪ್ರತಿನಿಗಳು ರಸ್ತೆ ಸರಿಪಡಿಸದಿದ್ದಲ್ಲಿ ಮರಳು ವಾಹನಗಳನ್ನು ತಡೆಗಟ್ಟಿ ಪ್ರತಿಭಟನೆ ಮಾಡಬೇಕಾಗುತ್ತದೆಎಂದು ಎಚ್ಚರಿಸಿದ್ದಾರೆ .
ಈ ಸಂದರ್ಭಗ್ರಾಮದ ನಿವಾಸಿಗಳಾದ ಗಣೇಶ, ರಾಜನ್, ಮಣಿ, ಸದಿ, ರಾಜೇಶ್, ವಿಜಯ್, ಸುನೀಲ್, ಸುಬ್ರು, ಸಾದಿಕ್, ಪದ್ಮನಾಭನ್ ,ಮಜೀದ್ ,ಪ್ರವೀಣ್, ನವೀನ್, ರವಿ, ಕಿಶೋರ್ , ಅಂತೋಣಿ,ಸಂತೋಷ, ಲತೇಶ್ ,ಶಿವರಾಜ್ ಮೋಹನ್ ಸೇರಿದಂತೆ ಮತ್ತಿತರರು ಇದ್ದರು.