ನಿರ್ಮಾಣದ ಹಂತದ ಮನೆಯಲ್ಲಿ ಮಾಲೀಕನ ಸಂಶಯಾಸ್ಪದ ಸಾವು : ಆರ್ಜಿ ಗ್ರಾಮದಲ್ಲಿ ಘಟನೆ

17/06/2020

ಮಡಿಕೇರಿ ಜೂ.17 : ಹೊಸದಾಗಿ ಮನೆಯನ್ನು ನಿರ್ಮಾಣ ಮಾಡಿ ಮನೆ ಸೇರುವ ತವಕದಲ್ಲಿದ್ದ ವ್ಯಕ್ತಿಯೋರ್ವರು ಸಂಶಯಾಸ್ಪದವಾಗಿ ಮರಣಹೊಂದಿದ ಘಟನೆ ನಗರದ ಹೊರವಲಯದಲ್ಲಿ ನಡೆದಿದೆ.
ಆರ್ಜಿ ಪಂಚಾಯಿತಿ ವ್ಯಾಪ್ತಿಯ ನಿವಾಸಿ ಸಿ.ಎಂ. ಪೂವಯ್ಯ ಅವರ ಪುತ್ರ ಚಂದಪಂಡ ಅನಿಲ್ ಅಪ್ಪಣ್ಣ (42) ದುರ್ಮರಣ ಹೊಂದಿದ ವ್ಯಕ್ತಿ. ಆರ್ಜಿ ಗ್ರಾಮದಲ್ಲಿ ನಿರ್ಮಾಣ ಹಂತದ ಹೊಸ ಮನೆಯ ಕೆಲಸವನ್ನು ನೋಡಿಕೊಂಡು ಬುರುವುದಾಗಿ ತೆರೆಳಿದ್ದರು. ಸಂಜೆ ಹೊಸ ಮನೆಯ ಅನತಿ ದೂರದಲ್ಲಿ ಆಟವಾಡುತ್ತಿದ್ದ ಮಕ್ಕಳು ಮನೆ ಹತ್ತಿರ ತೆರಳಿದ್ದಾರೆ. ಆಗ ಮೆಟ್ಟಿಲುಗಳ ಮೇಲೆ ಮುಗ್ಗರಿಸಿ ಬಿದ್ದಿರುವಂತೆ ಅನಿಲ್ ಅವರ ಶವ ಪತ್ತೆಯಾಗಿದೆ.
ಮಾಹಿತಿ ಪಡೆದು ನಗರ ಪೊಲೀಸರು ಆಗಮಿಸಿ ಸ್ಥಳ ಮಹಜರು ಮಾಡಿ ಕುಟುಂಬದರಿಂದ ಮಾಹಿತಿ ಪಡೆದಿದ್ದಾರೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರು ಪತ್ನಿ, ಪುತ್ರನನ್ನು ಅಗಲಿದ್ದಾರೆ.