ನಲ್ಲೂರು ಗ್ರಾಮದಲ್ಲಿ ನೇಣು ಬಿಗಿದುಕೊಂಡು ಕಾರ್ಮಿಕ ಸಾವು

17/06/2020

ಸುಂಟಿಕೊಪ್ಪ, ಜೂ,17: ಮದ್ಯವಸನಿ ವಿವಾಹಿತನೋರ್ವ ನೇಣಿಗೆ ಶರಣಾದ ಘಟನೆ ನಡೆದಿದೆ.
ಕಂಬಿಬಾಣೆ ಅತ್ತೂರು ನಲ್ಲೂರು ಗ್ರಾಮದ ನಿವಾಸಿ ಆರ್.ಮಣಿ ಅವರ ಪುತ್ರ ಹರೀಶ (41) ತನ್ನ ಮನೆ ಸಮೀಪದ ತೋಟದ ಮಾವಿನ ಮರಕ್ಕೆ ನೇಣಿಗೆ ಕೊರಳೊಡ್ಡಿ ಸಾವನ್ನಪ್ಪಿದ್ದಾನೆ.
ಶಿವಮೊಗ್ಗದಲ್ಲಿ ಕೂಲಿ ಕಾರ್ಮಿಕಳಾಗಿ ಸಂಸಾರ ಸಮೇತವಾಗಿ ದುಡಿಯುತ್ತಿದ್ದ ಈತ ಲಾಕ್‍ಡೌನ್ ಹಿನ್ನಲೆಯಲ್ಲಿ ತನ್ನ ಸ್ವಂತ ಮನೆ ಅತ್ತೂರು ನಲ್ಲೂರಿಗೆ ಬಂದು ನೆಲೆಸಿದ್ದು, ದಿನಾ ನಿಶಾ ಸೇವಿಸುತ್ತಿದ್ದ ಎನ್ನಲಾಗಿದೆ.
ತಾ.15 ರಂದು ರಾತ್ರಿ ವೇಳೆ ಮಾಲೀಕರ ತೋಟದ ಮಾವಿನ ಮರಕ್ಕೆ ನೇಣುಬಿಗಿದು ಕೊಂಡಿದ್ದಾನೆ. ಸುಂಟಿಕೊಪ್ಪ ಪೊಲೀಸರು ಎಎಸ್‍ಐ ತಿಮ್ಮಪ್ಪ ಶಿವಪ್ಪ ಹಾಗೂ ಸಿಬ್ಬಂದಿಗಳು ಈ ಸಂಬಂಧ ಸ್ಥಳಕ್ಕೆ ತೆರಳಿ ಮಹಜರು ನಡೆಸಿ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.