ನೂರು ವರ್ಷಗಳಿಗಿಂತ ಹೆಚ್ಚು ಇತಿಹಾಸ ಹೊಂದಿರುವ ಕೊಡಗಿನ ಮುನೀಶ್ವರ ವೀರಭದ್ರೇಶ್ವರ ದೇವಾಲಯ

17/06/2020

ಸುಮಾರು ನೂರು ವರ್ಷಗಳಿಗಿಂತ ಹೆಚ್ಚು ಇತಿಹಾಸ ಹೊಂದಿರುವ ಕೊಡಗಿನ ಮುನೀಶ್ವರ ವೀರಭದ್ರೇಶ್ವರ ದೇವಾಲಯ ಭಕ್ತದಿಗಳಲ್ಲಿ ಭಕ್ತಿಯ ಸಿಂಚನವನ್ನು ಪ್ರತಿಫಲಿಸುತ್ತಿದೆ.
ದಶಕಗಳ ದಾರಿ ಹಿಡಿದು ಬಂದಿದ್ದರೂ ಇಲ್ಲಿಯವರೆಗೂ ಅದರ ನೈಜ್ಯತೆಯನ್ನು ಕಳೆದಕೊಳ್ಳದೇ ಬರುತ್ತಿರುವ ಕುಲಭಾಂದವರ, ಭಕ್ತಾದಿಗಳ ಹಾಗೂ ಸಾರ್ವಜನಿಕರ ಶ್ರಮವನ್ನು ಭಿತ್ತರಿಸುತ್ತದೆ. ದೇವಾಲಯದ ಆವರಣವು ಬಹು ವಿಸ್ತಾರವಾಗಿದ್ದು, ಅವಶ್ಯಕ ಸಂಗತಿಗಳನ್ನು ಒಳಗೊಂಡಿದೆ.
ದೇವಾಲಯಕ್ಕೆ ಸಣ್ಣ ಹರಿವೊಂದನ್ನು ದಾಟಿ ಬಂದ ತಕ್ಷಣ ಅರಳಿ ವೃಕ್ಷವು ಆದರದಿಂದ ಬರಮಾಡಿಕೊಳ್ಳುವುದು. ಎಡಕೆ ನಡೆದರೆ ಅಲ್ಲಲ್ಲಿ ಅರಳಿರುವ ಹೂಗಳು, ತುಳಸಿ ತುಂಬೆಯಂತಹ ದೇವಾರ್ಚನೆಗಿರುವ ಗಿಡಗಳು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ.
ಪೂರ್ವ ದಿಕ್ಕಿಗಿರುವ ದೇವಾಲಯವು ಅತೀ ಸುಂದರವಾದ ಗೋಲಾಕಾರದ ಇಂಡೋಪಾಕ್ ಶೈಲಿಯಂತಹ ಅತ್ಯದ್ಭುತವಾದ ಗೋಪುರದ ಶೈಲಿಯನ್ನು ಒಳಗೊಂಡಿದೆ.
ಸುಂದರವಾಗಿರುವ ಬಹು ಸೂಕ್ಷ್ಮ ಕೆತ್ತನೆಗಳು ಆಕರ್ಷಿಸುತ್ತದೆ. ಪವಿತ್ರ ಕಲ್ಯಾಣಿ ತೀರ್ಥದ ಮೊದಲ ಭೇಟಿಯ ನಂತರ ವೀರಭದ್ರ ಗರ್ಭಗುಡಿಯಿದ್ದು, ಇದಕ್ಕೆ ನೇರವಾಗಿ ಮೂರು ವಿಗ್ರಹಗಳಿವೆ.
ಇದರ ಪ್ರಹಾರವು ಕೋಡ ವಿಸ್ತಾರವಾಗಿದ್ದು, ಅನೇಕ ಕಾರ್ಯಕ್ರಮಗಳಿಗೆ ಬಂದೊದಗಿದೆ. ವಾಷಿಕೋತ್ಸವ ನಡೆಯುವ ಮುನ್ನ ನಗರದ ಶಕ್ತಿ ದೇವತೆಗಳಾದ ಚೌಟಿಮಾರಿಯಮ್ಮ ದೇವಾಲಯ, ದಂಡಿನ ಮಾರಿಯಮ್ಮ ದೇವಾಲಯ, ಕಂಚಿಕಾಮಾಕ್ಷಿ ದೇವಾಲಯ, ಕೋಟೆ ಮಾರಿಯಮ್ಮ ದೇವಾಲ ಬೀರ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿದ ನಂತರ ಈ ದೇವಾಯದ ಪೂಜಾ ಕೈಂಕರ್ಯಗಳು ನೆರವೇರುವುದು.

ಹಿನ್ನಲೆ : ಮಡಿವಾಳರೆಂದರೆ ದೇಹವನ್ನೂ, ಧರಿಸುವ ವಸ್ತ್ರವನ್ನೂ ಮಡಿಯಾಗಿ ಎಂದರೆ ಶುಚಿಯಾಗಿಡುವ ಗುನ ಉಳ್ಳವರು.
ಮಡಿವಾಳ ಜನಾಂಗದ ಕಸಬು ವಸ್ತ್ರಗಳನ್ನು ಶುಚಿಗೊಳಿಸುವುದು ಆದರೆ ಕೇವಲ ವಸ್ತ್ರವಲ್ಲ. ಪರರ ಮನಸ್ಸನ್ನೂ, ತಮ್ಮ ಮನಸ್ಸನ್ನೂ ಮಡಿಯಾಗಿಸುತ್ತಾರೆ. ಅರ್ಥ ಪೂರ್ಣಗುಣಗಳು, ಸಹೃದಯತೆ, ಸಮಾಧನ, ಸಯೋದರತ್ವದ, ಧೈರ್ಯ, ವಚನಪಾಲನೆ ಇಂತಹ ಎಲ್ಲಾ ಗುಣಗಳೂ ಇವರಲ್ಲಿವೆ.
ಮಡಿವಾಳರ ಹುಟ್ಟು ಬಹಳ ಹಳೆಯ ಇತಿಹಾಸವನ್ನು ಹೊಂದಿದ್ದಾರೆ. ದಕ್ಷ ಮಹಾರಾನು ವಿಷ್ಣುವಿನ ಪರಮ ಭಕ್ತನಾಗಿದ್ದು, ಅವರ ವರದಂತೆ ಪ್ರಜಾಪತಿ ದಕ್ಷ ಎಂದು ಹೆಸರುವಾಸಿಯಾದನು. ದಕ್ಷನಿಗೆ ಸತಿ ಎಂಬ ಹೆಸರಿನಲ್ಲಿ ಒಬ್ಬ ಒಬ್ಬ ಮಗಳಿದ್ದಳು. ದಕ್ಷನು ತನ್ನ ಮಗಳಾದ ಸತಿಯನ್ನು ವಿಷ್ಣುವಂಶದವರಿಗೆ ವರಿಸಬೇಕೆಂದು ನಿಶ್ಚಯಿಸಿದನು. ಆದರೆ ಸತಿಯ ಮನಸ್ಸು ಶಿವನನ್ನೆ ನೆನೆಯಿತು. ಶಿವನೇ ಅವಳ ಪತಿಯೆಂದು ಅವಳು ನಿಶ್ಚಯಿಸಿದಳು.
ಸತಿಯ ಸ್ವಯಂವರದಲ್ಲಿ ಸತಿಯು ಶಿವನನ್ನು ಪತಿಯಾಗಿ ಸ್ವೀಕರಿಸಿದಳು. ಆದರೆ ಪ್ರಜಾಪತಿ ದಕ್ಷನು ಇದಕ್ಕೆ ಒಪ್ಪಿಗೆ ಸೂಚಿಸಲಿಲ್ಲ. ಸತಿ ಮತ್ತು ಈಶ್ವರನು ಬಹಳ ಸರಳ ಮತ್ತು ಸಂತೋಷದ ಜೀವನ ನಡೆಸಿದರು.
ದಕ್ಷನು ತನ್ನ ಆಸ್ತಾನದಲ್ಲಿ ಮಹಾ ಯಜ್ಞವನ್ನು ಏರ್ಪಡಿಸಿದ್ದನು. ಎಲ್ಲರನ್ನು ಆಮಂತ್ರಿಸಿದ ದಕ್ಷ ತನ್ನ ಅಳಿಯನಾದ ಶಿವನನ್ನು ಆಮಂತ್ರಿಸಲಿಲ್ಲ. ಸತಿಯು ಶಿವನ ವಚನಗಳನ್ನು ಸ್ವೀಕರಿಸದೆ ದಕ್ಷನ ಆಸ್ಥಾನಕ್ಕೆ ಹೋದಳು. ಅಲ್ಲಿ ದಕ್ಷನು ಶಿವನ ಬಗ್ಗೆ ಹೀನಾಮಾನವಾಗಿ ಮಾತನಾಡುತ್ತಿರುವುದನ್ನು ಕಂಡು ಕೋಪಗೊಂಡಳು ಇಂತಹ ಮಾತುಗಳನ್ನು ಕೇಳಿ ತನ್ನ ದೇಹ ಮಲಿನಗೊಂಡಿತೆಂದು, ಅಗ್ನಿ ದೇವರ ಬಳಿ ತನ್ನನ್ನು ಬಸ್ಮಮಾಡುವಂತೆ ಕೇಳಿಕೊಂಡಳು.
ಆದರೆ ಅಗ್ನಿದೇವ ಅವಳ ವಚನವನ್ನು ಸ್ವೀಕರಿಸಲಿಲ. ಶಿವನ ಮಡದಿಯನ್ನು ಭಸ್ಮಮಾಡುವುದು ಅಸಾಧ್ಯ ಎಂದನು.
ವಿಮರೀತ ಕ್ರೋದಿತಳಾದ ಸತಿಯು ತಾನೇ ತನ್ನನ್ನು ಭಸ್ಮಮಾಡಿಕೊಂಡಳು. ಸತಿಯ ಅಗಲಿಕೆಯಿಂದ ಕ್ರೋದಿತನಾದ ಶಿವನು ತನ್ನ ಒಂದು ಜಡೆಯನ್ನು ಕಿತ್ತು ನೆಲಕ್ಕೆ ಅಪ್ಪಳಿಸಿದಾಗ ವೀರಭದ್ರ ಎಂಬ ಧೂತನು ಉದ್ಭವಿಸಿದನು. ವೀರಭದ್ರನು ಶಿವನ ಧೂತನಲ್ಲದೆ, ಶಿವನ ಒಂದು ರೂಪವು ಆಗಿರುತ್ತಾನೆ. ವೀರಭದ್ರನು ಅತ್ಯಂತ ಕ್ರೋದದಿಂದ ದಕ್ಷನ ಸಂಹಾರಮಾಡಲು ಮುನ್ನುಗ್ಗುತ್ತಿರುತ್ತಾನೆ. ದಕ್ಷನು ಎದುರು ಕಂಡಾಗ ಸತಿಯ ಅಗಲಿಕೆಯನ್ನು ನೆನೆದು ಮತ್ತಷ್ಟು ಕೋಪದಿಂದ ದಕ್ಷನ ತಲೆಯನ್ನು ಕಡೆದು ಹಾಕುತ್ತಾನೆ.
ದಕ್ಷನನ್ನು ಸಂಹಾರ ಮಾಡಿದ ವಿಷಯವನ್ನು ಶಿವನಿಗೆ ತಿಳಿಸುವ ಪ್ರಸನ್ನತೆಯಿಂದ ವೀರಭದ್ರನು ಸಪ್ತಋಷಿಗಳ ಕುಟೀರವನ್ನು ದಾಟುವಾಗ ಅಲ್ಲಿ ಯಜ್ಞದಲ್ಲಿ ತಲ್ಲೀನರಾಗಿದ್ದ ಅವರ ಮೇಲೆ ವೀರಭದ್ರನ ಅಂಗವಸ್ತ್ರ ಸ್ಪರ್ಶಿಸುತ್ತದೆ.
ಆಗ ಕೋಪಗೊಂಡ ಖಷಿಮುನಿಗಳು ಅಶುದ್ಧವಾದ, ರಕ್ತ ಚಿಮ್ಮಿದ ವಸ್ತ್ರ ಸ್ಪರ್ಶಿಸಿ ಅವರನ್ನು ಮಲೀನ ಗೊಳಿಸಿಸಬೇಕೆಂದು ಶಪಿಸುತ್ತಾರೆ.
ಈ ಶಾಪದಿಂದ ಖಿನ್ನನಾದ ವೀರಭದ್ರನು ಶಿವನ ಬಳಿ ಬಂದು ನಡೆದ ಕಾರ್ಯ, ನೀಡಿದ ಶಾಪದ ಬಗ್ಗೆ ತಿಳಿಸುತ್ತಾನೆ. ಆಗ ಶಿವನು ತನಗಾಗಿ ಮಾಡಿದ ಕಾರ್ಯದಿಂದ ಶಾಪವನ್ನು ಪಡೆದ ವೀರಭದ್ರನು ಮುಂಬರುವ ದಿನಗಳಲ್ಲಿ ಈಶ್ವರನಿಗೆ ಗುರುವಾಗಿ ಬರಬೇಕೆಂದು ವರ ನೀಡುತ್ತಾನೆ. ಆಗ ನೀಡಿದ ವರವೇ ಮುಂದಿನ ಯುಗದಲ್ಲಿ ವೀರಭದ್ರನು ಮಡಿವಾಳ ಮಾಚೀದೇವರ ಜನ್ಮತಾಳಿ ಬಸವಣ್ಣನವರಿಗೆ ಗುರುವಾದರು.
ಈ ರೀತಿ ಗುರುಗಳ ಸ್ಥಾನ ಪಡೆದ ಮಡಿವಾಳ ಜನಾಂಗದ ಎಲ್ಲಾ ಗುಣಗಳನ್ನು ಕರಗತ ಮಾಡಿಕೊಂಡಿದ್ದಾರೆ. ಎಲ್ಲ ಕೆಲಸ ಕಾರ್ಯದಲ್ಲೂ ಮಡಿವಂತಿಕೆ ಇರಬೇಕೆಂದು ಇವರ ಇಚ್ಚೆ. ಆದರಿಂದ ಎಲ್ಲರ ವಸ್ತ್ರಗಳನ್ನು ಶುಭ್ರಗೊಳಿಸುತ್ತಾರೆ.