ರುಚಿಕರವಾದ ಮಶ್ರೂಮ್ ಆಮ್ಲೇಟ್ ಮಾಡುವ ವಿಧಾನ

June 17, 2020

ಬೇಕಾಗುವ ಸಾಮಾಗ್ರಿಗಳು :ಮೊಟ್ಟೆ 4 ಅಣಬೆ 1 ಪ್ಯಾಕೆಟ್ ಚಿಟಿಕೆಯಷ್ಟು ಗರಂ ಮಸಾಲ ರುಚಿಗೆ ತಕ್ಕ ಉಪ್ಪು ಈರುಳ್ಳಿ 1 ಕಾಳು ಮೆಣಸಿನ ಪುಡಿ 1 ಚಮಚ ಚೀಸ್ 1 ತುಂಡು ಬೆಣ್ಣೆ 2 ಚಮಚ.

ತಯಾರಿಸುವ ವಿಧಾನ : ಪಾತ್ರೆಗೆ 1 ಚಮಚ ಬೆಣ್ಣೆ ಹಾಕಿ ಉರಿಯಲ್ಲಿಡಿ. ಬೆಣ್ಣೆ ಬಿಸಿಯಾದಾಗ ಅದಕ್ಕೆ ಶುಚಿ ಮಾಡಿದ ಅಣಬೆಯನ್ನು ಹಾಕಿ, ರುಚಿಗೆ ತಕ್ಕ ಉಪ್ಪು ಮತ್ತು ಗರಂ ಮಸಾಲ ಹಾಕಿ ಚೆನ್ನಾಗಿ ಬೇಯಿಸಬೇಕು. * ಮೊಟ್ಟೆಗೆ ಸ್ವಲ್ಪ ಉಪ್ಪು ಮತ್ತು ಕರಿ ಮೆಣಸಿನ ಪುಡಿಯನ್ನು ಹಾಕಿ ಚೆನ್ನಾಗಿ ಕದಡಬೇಕು. * ನಂತರ ತವಾವನ್ನು ಗ್ಯಾಸ್ ಮೇಲೆಟ್ಟು ಸ್ವಲ್ಪ 2 ಚಮಚ ಎಣ್ಣೆ ಹಾಕಿ ಕದಡಿದ ಮೊಟ್ಟೆ ಹಾಕಿ , ಮೊಟ್ಟೆ ಸ್ವಲ್ಪ ಬೇಯುವಾಗ ಫ್ರೈ ಮಾಡಿದ ಅಣಬೆಯನ್ನು ಹಾಕಿ, ಅದರ ಮೇಲೆ ಚೀಸ್ ಹಾಕಿ ನಂತರ ತೆಗೆದರೆ ರುಚಿ-ರುಚಿಯಾದ ಮಶ್ರೂಮ್ ಆಮ್ಲೇಟ್ ರೆಡಿ.

error: Content is protected !!