ಜೂ. 20 ರಂದು ಕೊಡಗಿನ ವಿವಿಧೆಡೆ ವಿದ್ಯುತ್ ವ್ಯತ್ಯಯ

17/06/2020

ಮಡಿಕೇರಿ ಜೂ.17 : ಜೂನ್, 18 ರಂದು ಯೋಜಿಸಿದ್ದ ಕುಶಾಲನಗರ 220 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ನಿರ್ವಹಣೆ ಹಾಗೂ ದುರಸ್ತಿ ಕಾರ್ಯವನ್ನು ಕಾರಣಾಂತರಗಳಿಂದ ರದ್ದುಗೊಳಿಸಲಾಗಿದೆ. ಇದರ ಬದಲಾಗಿ ಜೂನ್, 20 ರಂದು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ 66/11ಕೆ.ವಿ ಕುಶಾಲನಗರ, 33/11ಕೆವಿ ಸೋಮವಾರಪೇಟೆ, 66/11ಕೆವಿ ಸುಂಟಿಕೊಪ್ಪ ಹಾಗೂ 66/11ಕೆವಿ ಮಡಿಕೇರಿ, ವಿದ್ಯುತ್ ಉಪಕೇಂದ್ರಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು. ಅದ್ದರಿಂದ ಕುಶಾಲನಗರ, ಕೂಡಿಗೆ, ನಂಜರಾಯಪಟ್ಟಣ, ಸುಂಟಿಕೊಪ್ಪ, ಚೆಟ್ಟಳ್ಳಿ, ಸೋಮವಾರಪೇಟೆ, ಶಾಂತಳ್ಳಿ, ಕುಮಾರಹಳ್ಳಿ, ಗೌಡಳ್ಳಿ, ಹೆಗ್ಗಡಮನೆ ಅಬ್ಬೂರುಕಟ್ಟೆ, ಐಗೂರು, ಹೊಸಗುತ್ತಿ, ಗಣಗೂರು, ಮಡಿಕೇರಿ, ಮೇಕೇರಿ, ಕಡಗದಾಳು, ಸಂಪಾಜೆ, ಭಾಗಮಂಡಲ ಹಾಗೂ ಸುತ್ತಮುತ್ತಲವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಮಡಿಕೇರಿ ವಿಭಾಗದ ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಕೋರಿದ್ದಾರೆ.