ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ : ಸುಂಟಿಕೊಪ್ಪದಲ್ಲಿ ಜನಜಾಗೃತಿ ವಾಹನಕ್ಕೆ ಚಾಲನೆ

17/06/2020

ಸುಂಟಿಕೊಪ್ಪ,ಜೂ.17: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿಯ ಆಶ್ರಯದಲ್ಲಿ ‘ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ’ಅಂಗವಾಗಿ ಸುಂಟಿಕೊಪ್ಪದ ವಾಹನ ನಿಲ್ಧಾಣದಲ್ಲಿ ಹೋಬಳಿ ವ್ಯಾಪ್ತಿಯ ಸಂಚಾರದ ‘ಜನಜಾಗೃತಿ’ ವಾಹನಕ್ಕೆ ಪಿಡಿಓ ವೇಣುಗೋಪಾಲ್ ಮತ್ತು ಕಸಾಪ ಹೋಬಳಿ ಅಧ್ಯಕ್ಷ ಎಂ.ಎಸ್.ಸುನಿಲ್ ಚಾಲನೆ ನೀಡಿದರು.
ನಂತರ ಮಾತನಾಡಿದ ಕಾರ್ಮಿಕ ಇಲಾಖೆಯ ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿಯ ಯೋಜನಾ ನಿರ್ದೇಶಕ ಸಿರಾಜ್ ಆಹ್ಮದ್ ಅವರು, ದಿ. 12 ರಂದು ಮಡಿಕೇರಿಯ ಜಿಲ್ಲಾಡಳಿತ ಭವನದ ಆವರಣದಲ್ಲಿ 10 ದಿನಗಳ ಜಾಗೃತಿ ಜಾಥಕ್ಕೆ ಚಾಲನೆ ದೊರಕಿದ್ದು, ಈ ಜಾಗೃತಿ ವಾಹನ ಕೊಡಗಿನಾದ್ಯಂತ ಸಂಚರಿಸಿ ಬಾಲ್ಯವಸ್ಥೆಯ ಹಾಗೂ ಕಿಶೋರಾವಸ್ಥೆಯ ಕಾರ್ಮಿಕರ ಪದ್ದತಿಯು ಮಕ್ಕಳನ್ನು ದೈಹಿಕವಾಗಿ, ಮಾನಸಿಕವಾಗಿ ನೈತಿಕವಾಗಿ ಶೋಷಣೆಗೆ ಒಳಪಡಿಸಿ ಅವರ ಶಿಕ್ಷಣಕ್ಕೆ ಅಡ್ಡಿ ಉಂಟಾಗುತ್ತದೆ.ಅಲ್ಲದೇ ಅಪಾಯಕಾರಿ ಉದ್ಧಿಮೆಗಳಲ್ಲಿ ನೇಮಿಸಿಕೊಳ್ಳದಂತೆ ಜಾಗೃತಿ ಮೂಡಿಸಲಾಗುವುದು. ಮುಂದಿನ ದಿನಗಳಲ್ಲಿ ಬಾಲಕಾರ್ಮಿಕರನ್ನು ಬಳಸಿಕೊಂಡಾಗ ದಿಢೀರನೇ ಧಾಳಿ ನಡೆಸಿದಾಗ ಅಂತಹ ಮಾಲೀಕರ ಮೇಲೆ ಕಾನೂನು ಕ್ರಮ ಮತ್ತು ದಂಡ ವಿಧಿಸಲಾಗುವುದು ಎಂದರು.
ಸುಂಟಿಕೊಪ್ಪ ಗ್ರಾ.ಪಂ.ಪಿಡಿಒ ವೇಣುಗೋಪಾಲ್, ಸಿಬ್ಬಂದಿಗಳಾದ ಪುನಿತ್, ಮಂದಣ್ಣ ಇದ್ದರು.