ಮೂರ್ನಾಡಿನ ಶ್ರೀ ಅನ್ನಪೂರ್ಣೇಶ್ವರಿ ದೇವಾಲಯದ ಅರ್ಚಕ ಮಹಾಭಲೇಶ್ವರ ಭಟ್ ಗೆ ಡಾಕ್ಟರೇಟ್ ಪದವಿ

ಮಡಿಕೇರಿ ಜೂ.17 : ಮೂರ್ನಾಡಿನ ಶ್ರೀ ಅನ್ನಪೂಣೇಶ್ವರಿ ದೇವಾಲಯದಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸುತ್ತಿರುವ ಮಹಾಭಲೇಶ್ವರ ಭಟ್ ಅವರಿಗೆ ಧಾರ್ಮಿಕತೆ ಮತ್ತು ಆಧ್ಯಾತ್ಮಿಕ ಪಾಂಡಿತ್ಯವನ್ನು ಗುರುತಿಸಿ ಬೆಂಗಳೂರಿನ ಅಂತರಾಷ್ಟ್ರೀಯ ಗ್ಲೋಬಲ್ ಪೀಸ್ ಯುನೀವರ್ಸಿಟಿ ಅಂತರಾಷ್ಟ್ರೀಯ ಆಚೀವರ್ಸ್ ಕೌನ್‍ಸಿಲ್ (international Global Peace University, International Achievers Council) ಅಧಿಕೃತವಾಗಿ ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಿದೆ.
ಕೊರೋನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ಸಭೆ ಸಮಾರಂಭವನ್ನು ನಡೆಸದೆ ಇರುವುದರಿಂದ ಅಂಚೆ ಮೂಲಕ ಡಾಕ್ಟರೇಟ್ ನೀಡಿದೆ.
ಪರಿಚಯ :
ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೋಕಿನ ಕೊಡ್ಲಗದ್ದೆ ಗ್ರಾಮದ ಶ್ರೀ ನಾರಾಯಣ ಗಾಂವ್ಕರ್ ಹಾಗೂ ಪಾರ್ವತಿ ಅವರ ಎರಡನೇ ಪುತ್ರನಾಗಿ 1978ರಲ್ಲಿ ಜನಿಸಿದ ಶ್ರೀ ಮಹಾಭಲೇಶ್ವರ ಭಟ್ ಬಾಲ್ಯದಿಂದಲೇ ರಾಮಾಯಣ, ಮಹಾಭಾರತ, ಭಗವದ್ಗೀತೆ ಹಾಗೂ ಆದ್ಯಾತ್ಮಕತೆ, ಧಾರ್ಮಿಕತೆಯ ಪುರಾಣಗಳನ್ನು ವಿದ್ಯಾಭ್ಯಾಸದ ಜೊತೆಗೆ ಓದಿ ಮೈಗೂಡಿಸಿಕೊಂಡ ಇವರು ಯಕ್ಷಗಾನ ಪ್ರಸಂಗ, ಸಾಮಾಜಿಕ ನಾಟಕದ ಪಾತ್ರಧಾರಿಯಾಗಿಯೂ ಪಾರಂಪರಿಕ ಸಂಸ್ಕøತಿ ಹಾಗೂ ಕಲೆಯ ಪೋಷಕರಾಗಿಯೂ, ಜ್ಯೋತಿಷ್ಯ ಶಾಸ್ತ್ರ ಮೈಗೂಡಿಸಿಕೊಂಡು ಮೂಲತಃ ಬಡ ಕೃಷಿ ಕುಟುಂಬದವಾಗಿದ್ದರೂ ಜೀವನೋಪಾಯಕ್ಕೆ ಅರ್ಚಕÀ ವೃತ್ತಿಯನ್ನು ಆಯ್ಕೆ ಮಾಡಿಕೊಂಡು ವೈವಾಹಿಕ ಜೀವನದ ನಂತರ ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕು, ಮೂರ್ನಾಡಿನ ಕೋಡಂಬೂರು ಗ್ರಾಮದಲ್ಲಿನ ಶ್ರೀ ಭದ್ರಕಾಳಿ ದೇವಾಲಯಕ್ಕೆ ಅರ್ಚಕರಾಗಿ 2012ರಲ್ಲಿ ಬಂದು ಅರ್ಚಕ ವೃತ್ತಿಯೊಂದಿಗೆ ಹಿಂದೂ ಆಧ್ಯಾತ್ಮಿಕ ಹಾಗೂ ಧಾರ್ಮಿಕತೆಯ ಪ್ರಚಾರ ಹಾಗೂ ಆಚರಣೆಯನ್ನು ಕೈಗೊಂಡು 2016ರಲ್ಲಿ ಮೌಡ್ಯತೆ ಹಾಗೂ ಅಸ್ಪøಸ್ಯತೆಯನ್ನು ಹೋಗಲಾಡಿಸಲೆಂದು ಮೂರ್ನಾಡಿನ ಗಾಂಧಿನಗದಲ್ಲಿ ಶ್ರೀ ಅನ್ನಪೂರ್ಣೇಶ್ವರಿ ದೇವಾಲಯವನ್ನು ನಿರ್ಮಿಸಿ, ಪೂಜೆ ಪುರಸ್ಕಾರಗಳನ್ನು ಸಮಾನತೆ ಭಾವನೆಯಿಂದ ನಡೆಸಿಕೊಂಡು ಬರಲಾಗುತ್ತಿದೆ. ಈ ಧಾರ್ಮಿಕ ಕಾರ್ಯಗಳ ಜೊತೆಯಲ್ಲಿ ಸಾಂಸ್ಕøತಿಕ ಕಲಾ ಪೋಷಣೆಯನ್ನು ಹಾಗೂ ಜ್ಯೋತಿಷ್ಯ ಸಾಂತ್ವನ ಎಂಬ ಪುಸ್ತಕವನ್ನು ಬರೆದು ಧಾರ್ಮಿಕತೆ ಮನೋಭಾವನೆಯನ್ನು ಸರಳತೆಗೊಳಿಸಿ ಧೈರ್ಯತುಂಬುವ ಕಾರ್ಯವನ್ನು ಮಾಡಿ, ಜಿಲ್ಲಾದ್ಯಾಂತ ಬ್ರಾಹ್ಮಣರ ವರ್ಗದ ಸಂಘಟನೆಗಾಗಿ ಮತ್ತು ಕೊಡಗಿನ ಕುಲದೇವತೆಯಾದ ಕಾವೇರಮ್ಮನ ಪಾವಿತ್ರತ್ಯೆಯನ್ನು ಕಾಪಾಡಿಕೊಳ್ಳಲು ಕೊಡಗಿನ ತಲಕಾವೇರಿಯಿಂದ ಕುಶಾಲನಗರ ಕಣಿವೆಯವೆಗೂ ಕೊಡಗು ಜಿಲ್ಲೆಯಾದ್ಯಾಂತ ಯಾಗ ಜ್ಯೋತಿಯನ್ನು ನಡೆಸಿ ಬಲಮುರಿಯಲ್ಲಿ ಐತಿಹಾಸಿಕ ಗಾಯತ್ರಿ ಪುನಶ್ಚರಣೆಯನ್ನು 10 ಯಜ್ಞಕುಂಡದಲ್ಲಿ 200 ಬ್ರಾಹ್ಮಣರನ್ನು ಒಳಗೊಂಡು ಇವರ ಅಧ್ಯಕ್ಷತೆಯಲ್ಲಿ ನಡೆಸಿರುವುದು ಇವರ ಹೆಗ್ಗಳಿಕೆ ಎನ್ನಬಹುದು.
ಕಲಾ ಸಂಸ್ಕøತಿ, ಧಾರ್ಮಿಕತೆ ಕಾರ್ಯಕ್ರಮಗಳನ್ನು ಹೊರತುಪಡಿಸಿ ಸಾಮಾಜಿಕ ಹಾಗೂ ನಂಬಿ ಬಂದ ಕೈಸೋತ ಜನರ ಆರ್ಥಿಕ ಸುಭದ್ರತೆಗೆಂದು ಷೇರು ಸಂಗ್ರಹಿಸಿ ಮೂರ್ನಾಡಿನಲ್ಲಿ ಶ್ರೀ ಅನ್ನಪೂರ್ಣೇಶ್ವರಿ ಪತ್ತಿನ ಸಹಕಾರಿ ಸಂಘವನ್ನು ರಚಿಸಿ ಚಾಲನೆಯ ಕಾರ್ಯ ಪ್ರಗತಿಯಲ್ಲಿದ್ದು, ಈ ರೀತಿಯ ಪ್ರಯತ್ನವನ್ನು ನಡೆಸಿ ಎಲ್ಲಾ ಕ್ಷೇತ್ರದಲ್ಲಿ ಸೈ ಎನಿಸಿಕೊಂಡಿರುವುದನ್ನು ನೆನಪಿಸಿ ಕೊಳ್ಳಬಹುದು.
ಇತ್ತೀಚಿನ ದಿನಗಳಲ್ಲಿ ಮಕರ ರಾಶಿಕೆ ಶನಿ ಪ್ರವೇಶ ಎಂಬ ಲೇಖನವನ್ನು ಮಾದ್ಯಮಕ್ಕೆ ನೀಡಿರುವುದರಲ್ಲಿ ಔಷಧಿ ಇಲ್ಲದ ಮಾರಕ ರೋಗವು ಪ್ರಪಂಚದಾದ್ಯಂತ ಹರಡಲಿದೆ. ಇಡೀ ಪ್ರಪಂಚಕ್ಕೆ ಕಾರ್ಮೋಡದ ದಿನಗಳೆಂದು ಭವಿಷ್ಯ ನುಡಿದಿದ್ದರು. ಅದರಂತೆ ಚೀನಾದಲ್ಲಿ ಹುಟ್ಟಿರುವ ಕೊರೋನಾ ಎಂಬ ಮಹಾಮರಿ ರೋಗವು ಜನವರಿಯಲ್ಲಿ ಹುಟ್ಟಿದರೂ ಪ್ರಪಂಚಕ್ಕೆ ಮತ್ತು ಅಂತರಾಷ್ಟ್ರಗಳಿಗೆ ಆ ಸಮಯದಲ್ಲಿ ಮಾಹಿತಿಯನ್ನು ನೀಡಿಲ್ಲದೆ ನಂತರದ ದಿನಗಳಲ್ಲಿ ಈ ರೋಗವು ಮನುಷ್ಯರಿಂದ ಮನುಷ್ಯರಿಗೆ ಹರಡುವ ರೋಗವಲ್ಲವೆಂದು ವಿಶ್ವಸಂಸ್ಥೆ ಸ್ಪಷ್ಟೀಕರಣ ನೀಡಿತ್ತು. ಆದರೆ ಮಾರ್ಚ್ ತಿಂಗಳ 3ನೇ ತಾರಿಕಿ ನಂದು ಭಾರತದಲ್ಲಿ ಪ್ರತ್ಯಕ್ಷವಾಯಿತು. ಇದರಿಂದ ಕಾಲಜ್ಞಾನದ ಪಾಂಡಿತ್ಯವನ್ನು ಶ್ರೀ ಮಹಾಭಲೇಶ್ವರ ಭಟ್ ಹೊಂದಿದ್ದಾರೆ ಎಂಬುದರಲ್ಲಿ ನಿಸ್ಸಂಶ.
